ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನಕ್ಕೆ ಅಭಿಮಾನಿಗಳ ಪಾದಯಾತ್ರೆ

29072022 koppal padayatre
Published on

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ 75ನೇ ಜನ್ಮದಿನ ನಿಮಿತ್ತ ದಾವಣಗೆರೆಯಲ್ಲಿ ಆ.3ರಂದು ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಅವರ ಅಭಿಮಾನಿಗಳು ಗುರುವಾರ ಗವಿಮಠದಿಂದ ಪಾದಯಾತ್ರೆ ಆರಂಭಿಸಿದರು.

ಜಿಲ್ಲೆಯ ವಿವಿಧ ಗ್ರಾಮಗಳ ಅಭಿಮಾನಿಗಳು ಭಾಗಿಯಾಗಿದ್ದು, ಅಳವಂಡಿ, ಮುಂಡರಗಿ, ಹೂವಿನಹಡಗಲಿ, ಹರಪನಳ್ಳಿ ಮಾರ್ಗವಾಗಿ ದಾವಣಗೆರೆಗೆ ತೆರಳಲಿದ್ದಾರೆ. ಪಾದಯಾತ್ರೆ ಆರಂಭಿಸುವ ಮುನ್ನ ನಗರದ ಗವಿಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶ್ರೀಗಳ ಆಶೀರ್ವಾದ ಪಡೆದು ಡೊಳ್ಳು ಬಾರಿಸುವ ಮೂಲಕ ಯಾತ್ರೆ ಆರಂಭಿಸಿದರು. ಮುಖಂಡರಾದ ಗುಡದಪ್ಪ ಹಲಗೇರಿ, ಸಂತೋಷ ಕುರಿ, ಮನೋಜ ಮಡ್ಡಿ, ಭರಮಣ್ಣ ಗುರಿಕಾರ, ಚಿದಾನಂದಪ್ಪ ಗುರಿಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net