ತುಂಗಭದ್ರಾ ನದಿಗೆ ಅಪಾರ ನೀರು, ಮುಳುಗಿದ ಹುಲಿಗಿ ಸ್ನಾನಘಟ್ಟ

koppal flood tb dam huligi river
koppal flood tb dam huligi river
ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನ ಬಳಿ ನೀರಿನಲ್ಲಿ ಮುಳುಗಿದ ಸ್ನಾನಘಟ್ಟ
Published on

ಕೊಪ್ಪಳ: ತಾಲೂಕಿನ ಮುನಿರಾಬಾದ್​ ಜಲಾಶಯದಿಂದ ನದಿಗೆ 2 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರು ಬಿಡಲಾಗಿದೆ. ಪರಿಣಾಮ ಹುಲಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನದ ಸ್ನಾನಘಟ್ಟ ಸೇರಿ ಇತರ ಪ್ರದೇಶಗಳಿಗೆ ನೀರು ನುಗ್ಗಿದೆ. ಒಳ ಹರಿವು ಏರಿಕೆಯಾಗುತ್ತಿದ್ದು ಮತ್ತಷ್ಟು ನೀರು ಹೊರ ಬಿಡುವ ಸಾಧ್ಯತೆ ಇದೆ. ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ.

ಹಿನ್ನೀರು ಭಾಗದ ಗ್ರಾಮಗಳು ಹಾಗೂ ನದಿಪಾತ್ರದ 22 ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಹಾಗೂ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಲಾಗಿದೆ. ಗುರುವಾರ ಅಧಿಕ ನೀರು ಬಂದ ಹಿನ್ನೆಲೆಯಲ್ಲಿ ಐತಿಹಾಸಿ ಹುಲಿಗೆಮ್ಮ ದೇವಿ ಸನ್ನಿಧಾನದಲ್ಲಿ ಭಕ್ತರಿಗೆ ನದಿಸ್ನಾನ ನಿಷೇಧಿಸಲಾಗಿದೆ. ಪೊಲೀಸ್​ ಹಾಗೂ ಗೃಹ ರಕ್ಷಕದಳ ಸಿಬ್ಬಂದಿ ನಿಯೋಜಿಸಿ ಭದ್ರತೆ ಕಲ್ಪಿಸಲಾಗಿದೆ. ಜತೆಗೆ ಬ್ಯಾರಿಕೇಡ್​ ಅಳವಡಿಸಿಲಾಗಿದೆ. ಸ್ನಾನಟ್ಟ ಹಾಗೂ ಕೇಶ ಮುಂಡನ ಕೊಠಡಿಗೆ ನೀರು ಹೊಕ್ಕಿದ್ದು, ಜಲಾವೃತವಾಗಿದೆ.

ಹಿನ್ನೀರು ಭಾಗದಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಗ್ರಾಪಂಗಳ ಮೂಲಕ ಡಂಗೂರ ಸಾರಿಸಿ ಎಚ್ಚರಿಕೆ ನೀಡಲಾಗುತ್ತಿದೆ. ನದಿಪಾತ್ರದ ಹೊಳೆ ಮುದ್ಲಾಪುರ, ಶಿವಪುರ, ಮಹಮ್ಮದ ನಗರ, ನಗರಗಡ್ಡಿ ಮಠ ಹಾಗೂ ಇತರ ಗ್ರಾಮಗಳಲ್ಲಿ ನೆರೆ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net