ಗೃಹರಕ್ಷಕ ದಳ ಸದಸ್ಯ ಸ್ಥಾನಗಳಿಗೆ ಲಿಖಿತ-ದೈಹಿಕ ಪರೀಕ್ಷೆ ಅ.19ಕ್ಕೆ

Published on

ಕೊಪ್ಪಳ: ಗೃಹರಕ್ಷಕ ದಳ ಸದಸ್ಯರಾಗಲು ಬಯಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಮತ್ತು ದೈಹಿಕ ಪರೀಕ್ಷೆ ಅ.19ರಂದು ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಹೃಹರಕ್ಷಕ ದಳದಲ್ಲಿ ಖಾಲಿ ಇರುವ 128 ಸ್ಥಾನಗಳಿಗೆ 2024ರ ಫೆಬ್ರವರಿ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಹೊಸದಾಗಿ ಗೃಹರಕ್ಷಕ ದಳದ ಸದಸ್ಯರಾಗಲು ಬಯಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಮತ್ತು ದೈಹಿಕ ಪರೀಕ್ಷೆ ಹಮ್ಮಿಕೊಳ್ಳಲಾಗುವುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಮೂಲ ಆಧಾರ ಕಾರ್ಡ ನೊಂದಿಗೆ ಅ.19ರಂದು ಬೆಳಗ್ಗೆ 7.45 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ತಪ್ಪದೆ ಹಾಜರಾಗಬೇಕು ಎಂದು ಕೊಪ್ಪಳದ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net