ಮನುಕುಲದ ಜ್ಯೋತಿ ಬೆಳಗಿದ ಮಹಾನ್ ಪುರುಷ

19102021 Koppal EID Milad
Published on


ಕೊಪ್ಪಳ: ಸಮಾನತೆಯ ಸಂದೇಶ ಸಾರಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಮನುಕುಲದ ಜ್ಯೋತಿ ಬೆಳಗಿದ ಮಹಾನ್ ಪುರುಷ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.

ತಾಲೂಕಿನ ಹುಲಿಗಿ-ಹೊಸಳ್ಳಿ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೈಗಂಬರರ ಬೋಧನೆಗಳು ಕೇವಲ ಇಸ್ಲಾಂ ಧರ್ಮಕ್ಕೆ ಸೀಮಿತವಾಗದೆ ಮನುಕುಲಕ್ಕೆ ದಾರಿ ದೀಪವಾಗಿವೆ. ಅಹಿಂಸೆ, ಶಾಂತಿ, ಸರ್ವರಿಗೂ ಒಳಿತನ್ನು ಮಾಡಬೇಕು ಎಂದು ಅವರು ತಿಳಿ ಹೇಳಿದರು. ಅಂಥ ಪ್ರವಾದಿಗಳ ವಾಣಿಯನ್ನು ನಾವಿಂದು ಪಾಲಿಸಬೇಕಿದೆ ಎಂದರು.

ವಕೀಲ ಪೀರಾ ಹುಸೇನ್ ಹೊಸಳ್ಳಿ ಮಾತನಾಡಿ, ಪೈಗಂಬರ್ ಒಬ್ಬ ಶಾಂತಿಧೂತ. ಜಗತ್ತಿನಲ್ಲಿ ಇರುವುದು ಮಾನವ ಕುಲ ಒಂದೇ. ಸರ್ವರೂ ಭಾವೈಕ್ಯತೆಯಿಂದ ಬಾಳಬೇಕೆಂಬುದು ಅವರ ಕನಸಾಗಿತ್ತು ಎಂದರು. ನಗರದ ಕೋಟೆ ಏರಿಯಾದಿಂದ ಈದ್ಗಾ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು. ಶಾಸಕ ರಾಘವೇಂದ್ರ ಹಿಟ್ನಾಳ್, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ವಕೀಲ ಆಸೀಫ್ ಅಲಿ, ಮುಖಂಡರಾದ ಕೆ.ಎಂ.ಸೈಯದ್, ಅಮ್ಜದ್ ಪಟೇಲ್, ಎಂ.ಕಾಟನ್ ಪಾಷಾ, ಮಾನ್ವಿ ಪಾಷಾ, ಅಕ್ಬರ್ ಪಲ್ಟನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net