

ಕೊಪ್ಪಳ: ಮಕ್ಕಳಲ್ಲಿ ಅಪವಷ್ಟಿಕತೆ ನಿವಾರಣೆಗೆ ಮೊಟ್ಟೆ ವಿತರಿಸಲಾಗುತ್ತಿದೆ. ಈ ಕಾರ್ಯಕ್ಕೆ ಅಜೀಂ ಪ್ರೇಮ್ಜಿ ೌಂಡೇಶನ್ ಸಹಕರಿಸುವ ಮೂಲಕ ಮಾದರಿಯಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಸಿಪಿಎಸ್ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೀರಭಾಗ್ಯ, ಬಿಸಿಯೂಟ, ವಾರದಲ್ಲಿ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಿಸಲಾಗುವುದು. ಈ ಕಾರ್ಯಕ್ಕೆ 1500 ಕೋಟಿ ರೂ.ದೇಣಿಗೆ ಅಜೀಂ ಪ್ರೇಮ್ ಜೀ ೌಂಡೇಶನ್ ನೀಡಿದೆ. ದೇಶದಲ್ಲಿ ಅನೇಕರು ಶ್ರೀಮಂತರಿದ್ದಾರೆ. ಆದರೆ, ದಾನ ಮಾಡುವ ಮನೋಭಾವ ಇರುವವರು ಕೆಲವರು ಮಾತ್ರ. ೌಂಡೇಶನ್ ಇತರ ಶೈಕ್ಷಣಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿದೆ ಎಂದರು.
ಶಿಕ್ಷಕ ಬೀರಪ್ಪ ಅಂಡಗಿ ಮಾತನಾಡಿ, ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅತಿ ಹೆಚ್ಚು ಮಕ್ಕಳಿದ್ದಾರೆ. ಶೌಚಗೃಹ ಸಮಸ್ಯೆ ಇದೆ ಎಂದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಸರ್ಕಾರ ಶಾಲಾ ಮಕ್ಕಳಿಗಾಗಿ ಅನೇಕ ಯೋಜನೆ ಜಾರಿ ಮಾಡಿದೆ. ಅಧಿಕಾರಿಗಳು ಸಮರ್ಪಕವಾಗಿ ಜಾರಿ ಮಾಡುವಂತೆ ತಿಳಿಸಿದರು.
ನಗರಸಭೆ ಸದಸ್ಯ ಅಜೀಮ ಅತ್ತಾರ, ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿ ಅನಿತಾ, ತಾಲೂಕ ಅಧಿಕಾರಿ ಮಲ್ಲಿಕಾರ್ಜುನ ಗುಡಿ, ಹನುಮಂತಪ್ಪ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಾಗೋಡಿ, ಕಾಶಿನಾಥ ಸಿರಿಗೇರಿ, ಮಲ್ಲಿಕಾರ್ಜುನ ಹ್ಯಾಟಿ ಇತರರಿದ್ದರು.