ಬಲವಂತವಾಗಿ ಕೆಲಸ ಹೇರಬೇಡಿ; ಆಶಾ ಕಾರ್ಯಕರ್ತೆಯರ ಪ್ರತಿಭಟನೆ

31032021 Koppal Asha workers protest
Published on

ಇ- ಸಮೀಕ್ಷೆ ಅವ್ಯವಸ್ಥೆಗೆ ಆಕ್ರೋಶ

ಕೊಪ್ಪಳ: ಸೂಕ್ತ ಸೌಲಭ್ಯಗಳನ್ನು ಕಲ್ಪಿಸದೆ ಬಲವಂತವಾಗಿ ಇ-ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಇ-ಸಮೀಕ್ಷೆ ಬಗ್ಗೆ ತರಬೇತಿ ನೀಡಲಾಗಿದ್ದು, ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಅಂಗನವಾಡಿ, ಆರೋಗ್ಯ ಸಹಾಯಕರು, ಎಂಎಲ್‌ಎಚ್‌ಪಿ ಸಿಬ್ಬಂದಿ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆಂದು ಹೇಳಲಾಗಿತ್ತು. ಆದರೆ, ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ. ಕಡಿಮೆ ಅವಧಿಯಲ್ಲಿ ಸಮೀಕ್ಷೆ ಮುಗಿಸುವಂತೆ ಒತ್ತಡ ಹೇರಲಾಗುತ್ತಿದೆ. ಮೊಬೈಲ್ ಇಲ್ಲದವರಿಗೆ ವೈಯಕ್ತಿಕವಾಗಿ ಮೊಬೈಲ್ ಖರೀದಿಸಬೇಕೆಂದು ಸೂಚಿಸುತ್ತಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಯಿಂದಲೇ ಮೊಬೈಲ್ ನೀಡುವುದರ ಜತೆಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಬೇಕು. ಸಮೀಕ್ಷಾ ಕಾರ್ಯಕ್ಕೆ ಪ್ರತ್ಯೇಕ ಗೌರವಧನ ನೀಡಬೇಕು. ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಆರ್ಥಿಕ ಮಾಹಿತಿ ಸಂಗ್ರಹ ಕಷ್ಟವಾಗಿದೆ. ಸಮೀಕ್ಷೆಗೆ ಒತ್ತಡ ಹೇರಬಾರದು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net