ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಫೆ.11ರಂದು ಕೊಪ್ಪಳ ಬಂದ್

08022022 Koppal Allama prabhu bettadur
Published on

ಕೊಪ್ಪಳ: ರಾಯಚೂರಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಘಟನೆ ಖಂಡಿಸಿ ಫೆ.11ರಂದು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.

ನಗದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ಸಚಿವರು ಈ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಖಂಡಿಸಿ ಫೆ.11ರಂದು ಸಂವಿಧಾನ ಉಳಿಸಿ ಆಂದೋಲನ ಸಮಿತಿಯಿಂದ ಜಿಲ್ಲಾ ಕೇಂದ್ರದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದರು. ಮುಖಂಡರಾದ ರಾಮಣ್ಣ ಕಲ್ಲಣ್ಣನವರ್, ಹನುಮಂತಪ್ಪ ಕೌದಿ, ಶಂಕರ ನಾಯಕ್, ಗೈಬುಸಾಬ ಚಟ್ನಿ, ಈರಣ್ಣ ಹುಣಸಿನ ಮರ, ರಮೇಶ ಹಡಪದ, ಸಂಗಮೇಶ ಬಾದವಾಡಗಿ, ಮಾರುತಿ ಚಾಮಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net