ವರದಕ್ಷಿಣೆ ಕಿರುಕುಳ; ಪತ್ನಿಯ ಕೊಂದ ಪೇದೆ ಬಂಧನ

crime arrest
Published on

ಕೊಪ್ಪಳ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಹತ್ಯೆ ಮಾಡಿದ ಆರೋಪದಡಿ ಪೊಲೀಸ್ ಪೇದೆ ಹನುಮೇಶ ಮೇಟಿಯನ್ನು ಗುರುವಾರ ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಯಲಬುರ್ಗಾ ತಾಲೂಕಿನ ಕಲ್ಲಬಾವಿ ಗಾಮದ ಪೇದೆ ಹಾಗೂ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಹೊಸೂರು ಗ್ರಾಮದ ರೇಷ್ಮಾ ಮದುವೆ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು. ಮದುವೆಯಲ್ಲಿ 11 ತೊಲ ಬಂಗಾರ, 2.5 ಲಕ್ಷ ರೂ. ನಗದು ನೀಡಿದ್ದು, ಇನ್ನೂ 1 ಲಕ್ಷ ರೂ. ಹಾಗೂ 20 ಗ್ರಾಂ ಬಂಗಾರ ನೀಡುವಂತೆ ಪೀಡಿಸುತ್ತಿದ್ದ. ದೀಪಾವಳಿ ಹಬ್ಬಕ್ಕೆ ಮಗಳನ್ನು ತವರಿಗೂ ಕಳಿಸಿಲ್ಲ. ಮನೆಯವರೆಲ್ಲ ಹಲ್ಲೆ ನಡೆಸಿ, ಕೊಪ್ಪಳ ತಾಲೂಕಿನ ಶಿವಪುರ ಕೆರೆಗೆ ತಳ್ಳಿದ್ದಾರೆಂದು ರೇಷ್ಮಾ ತಂದೆ ಬೇವೂರು ಠಾಣೆಯಲ್ಲಿ ನ.1ರಂದು ದೂರು ದಾಖಲಿಸಿದ್ದಾರೆ.

ತನಿಖೆ ಕೈಗೊಂಡ ಪೊಲೀಸರು ಗುರುವಾರ ಭಾನಾಪುರ ಕ್ರಾಸ್ ಬಳಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ದೂರು ದಾಖಲಾದ ಎರಡು ದಿನದಲ್ಲಿ ಆರೋಪಿ ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net