

ಕೊಪ್ಪಳ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಕಳೆದ ಎರಡು ದಿನದಲ್ಲಿ ಮಕ್ಕಳು ಸೇರಿ ಆರು ಜನರ ಮೇಲೆ ಗಂಭೀರ ದಾಳಿ ಮಾಡಿವೆ.
10 ಮತ್ತು 11ನೇ ವಾರ್ಡ್ನ ಕನಕಗಿರಿ ಓಣಿ, ದಿನ್ಯಾರ ಓಣಿಯಲ್ಲಿ ಮೂವರು ಶಾಲಾ ಮಕ್ಕಳ ಮೇಲೆ ದಾಳಿ ನಡೆಸಿವೆ. ತಲೆ, ಕೈ ಸೇರಿ ದೇಹದ ಇತರ ಭಾಗಗಳಲ್ಲಿ ಕಚ್ಚಿದ್ದು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಂಗಳವಾರವೂ ಶಾಲೆಗೆ ತೆರಳುತ್ತಿದ್ದ ರ್ಹಾನ್, ಮಂಜು, ಅಬ್ರಹಾರ ಎಂಬ ಮಕ್ಕಳ ಮೇಲೆ ನಾಯಿ ಗುಂಪಾಗಿ ದಾಳಿ ಮಾಡಿವೆ. ಏಕ ಕಾಲಕ್ಕೆ 5&6 ನಾಯಿಗಳು ಕಚ್ಚುತ್ತಿದ್ದು ಜನರು ಓಣಿಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ.
ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸಿಲ್ಲ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು, ನಿಯಂತ್ರಣ ಮಾಡಬೇಕಿದೆ. ಮನವಿ ಸಲ್ಲಿಸಿದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳುತತಿಲ್ಲವೆಂದು ನಿವಾಸಿ ಸಲೀಂ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದರು.