

ಆಕಾಶ ದೀಪಗಳನ್ನು ಹಾರಿಬಿಟ್ಟ ಯುವಕರು | ನಿಷೇಧವಿದ್ದರೂ ಕೇಳಿಸಿದ ಪಟಾಕಿ ಸದ್ದು
ಕೊಪ್ಪಳ: ನಾಡಿನ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಭಾನುವಾರ ಜನರು ಸಡಗರ ಸಂಭ್ರಮದಿಂದ ಆಚರಿಸಿದರು. ಶನಿವಾರ ಹಾಗೂ ಭಾನುವಾರ ಎರಡು ದಿನದಂದು ಹಬ್ಬ ಬಂದ ಕಾರಣ, ಜಿಲ್ಲಾದ್ಯಂತ ಲಕ್ಷ್ಮೀ ಆರಾಧನೆ ಕಂಡುಬಂತು. ಮಹಿಳೆಯರು, ಮಕ್ಕಳು ಹೊಸಬಟ್ಟೆ ತೊಟ್ಟು ಹಬ್ಬ ಆಚರಿಸಿದರು.
ಕರೊನಾ ಭಯದ ನಡುವೆಯೂ ಹಬ್ಬ ಬಂದಿದ್ದು, ಜನರು ಮೈಮರೆತು ಅದ್ದೂರಿಯಾಗಿಯೇ ಆಚರಣೆ ಮಾಡಿದ್ದು ಕಂಡುಬಂತು. ಪಟಾಕಿ ನಿಷೇಧವಿದ್ದರೂ ಜನರು ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದರು. ಇನ್ನು ಕೆಲವರು ಪಟಾಕಿ ಬದಲು, ಆಕಾಶ ದೀಪಗಳನ್ನು ಹಾರಿಬಿಟ್ಟು ಸಂಭ್ರಮಿಸಿದರು. ನಗರದ ವಿವಿಧ ಅಂಗಡಿಗಳಲ್ಲಿ ಲಕ್ಷ್ಮೀ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.