

ಕೊಪ್ಪಳ: ಕರೊನಾ ಆತಂಕದ ನಡುವೆಯೇ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚೇ ಗಣೇಶೋತ್ಸವ ಸಂಭ್ರಮ ಕಂಡುಬರುತ್ತಿದೆ. ಆದರೆ, ಕೋವಿಡ್ ಪೂರ್ವದಲ್ಲಿನ ವೈಭವ, ತರಹೇವಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ ಸೇರಿದಂತೆ ಇತರ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕಡಿವಾಣ ಬಿದ್ದಿದೆ.
ನಗರದ ಜವಾಹರ ರಸ್ತೆ, ಈಶ್ವರ ಪಾರ್ಕ್, ಗಡಿಯಾರ ಕಂಬ ರಸ್ತೆ, ಕೋಟೆ ರಸ್ತೆ, ಮೇದಾರ ಓಣಿ ಸೇರಿದಂತೆ ಬೆರಳೆಣಿಕೆ ಕಡೆ ವಿಘ್ನೇಶ್ವರನ ಪ್ರತಿಷ್ಠಾಪನೆಯಾಗಿದೆ. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕೆಲವೆಡೆ ಗಣೇಶನ ಮೆರವಣಿಗೆ, ಹಾಡು, ಕುಣಿತ ಕಂಡುಬಂತು. ಸಾಮೂಹಿಕ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.