ಒಂದು ಚಿತ್ರ ಸಾವಿರ ಪದಗಳಿಗೆ ಸಮ

Koppal photographer programe
ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಛಾಯಾಗ್ರಾಹಕರ ಸಮಾವೇಶವನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು. ಉಜ್ಜಿನಿ ಶಾಖಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ, ಜಿಪಂ ಕೆಡಿಪಿ ಸದಸ್ಯ ರವಿ ಕುರಗೋಡ, ಡಿವೈಎಸ್ಪಿ ಮುತ್ತಣ್ಣ ಸರವಗೋಳ ಇದ್ದರು.
Published on

ಕೊಪ್ಪಳ: ಚಿತ್ರ ಇತಿಹಾಸ ಕಟ್ಟಿಕೊಡುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಅಭಿಪ್ರಾಯಪಟ್ಟರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜಿಲ್ಲಾ ಛಾಯಾಗ್ರಾಹಕರ ಕ್ಷೇವಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಛಾಯಾಗ್ರಾಹಕರ ಸವಾವೇಶ ಮತ್ತು ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ಅತಿಥಿಗಳಿಲ್ಲದೇ ನಡೆಯಬಹುದು. ಆದರೆ, ಛಾಯಾಗ್ರಾಹಕರಿಲ್ಲದೇ ನಡೆಯುವುದಿಲ್ಲ. ಎಲ್ಲ ರಂಗದಲ್ಲೂ ೆಟೋಗೆ ಆದ್ಯತೆ ಇದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮವಾಗಿದೆ ಎಂದರು.

ಜಿಲ್ಲಾ ಛಾಯಾಗ್ರಾಹಕರ ಕ್ಷೇವಾಭಿವೃದ್ಧಿ ಸಂದ ಅಧ್ಯಕ್ಷ ವಿಜಯಕುವಾರ ವಸದ್ ಮಾತನಾಡಿ, ಛಾಯಾಗ್ರಾಹಕರ ಏಳಿಗೆಗಾಗಿ ಸಂಟನೆ ಮುಖ್ಯ. ಇದು ನಮ್ಮ ಬದುಕಿನ ಬುತ್ತಿ. ವೃತ್ತಿಗೆ ಗೌರವ ನೀಡಿ. ಒಗ್ಗಟ್ಟಿನಿಂದ ಬೇಡಿಕೆ ಈಡೇರಿಕೆಗೆ ಹೋರಾಡೊಣ. ಅಸಂಘಟಿತ ಕಾರ್ಮಿಕ ವಲಯಕ್ಕೆ ನಮ್ಮನ್ನು ಸೇರಿಸಿದ್ದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದಲ್ಲಿ ೆಟೋ ಪ್ರದರ್ಶನ ಏರ್ಪಡಿಸಲಾಗಿತ್ತು. ಛಾಯಾಗ್ರಾಹಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net