ಕೊಪ್ಪಳ ನೂತನ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್

Koppal DC S Vikas Kishor
ಡಿಸಿ ಎಸ್.ವಿಕಾಸ್ ಕಿಶೋರ್
Published on

ಕೊಪ್ಪಳ: ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಸೋಮವಾರ ವರ್ಗಾವಣೆಯಾಗಿದ್ದಾರೆ. 2018ರ ಸೆಪ್ಟೆಂಬರ್‌ನಲ್ಲಿ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ವಿರುಪಾಪುರ ಗಡ್ಡಿ ತೆರವು ಸೇರಿ ಜಿಲ್ಲೆಯ ಹಲವು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು. ಚುನಾವಣೆ, ಆನೆಗೊಂದಿ ಉತ್ಸವ ಆಯೋಜನೆ ಹಾಗೂ ಕರೊನಾ ನಿಯಂತ್ರಣ ಮಾಡುವ ಮೂಲಕ ಜಿಲ್ಲೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ. ಸದ್ಯ ನೂತನ ಜಿಲ್ಲಾಧಿಕಾರಿಯಾಗಿ ಸುರಲಕರ್ ವಿಕಾಸ್ ಕಿಶೋರ್ ಆಗಮಿಸಲಿದ್ದಾರೆ. ಇವರು ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net