ಭ್ರೂಣಲಿಂಗ ಪತ್ತೆ ಮಾಡಿದರೆ ಕಠಿಣ ಕ್ರಮ

dho dr.lingaraj pc and pndt act
koppal dho dr.lingaraj pc and pndt act
ಕೊಪ್ಪಳದಲ್ಲಿ ಡಿಎಚ್​ಒ ಡಾ.ಟಿ.ಲಿಂಗರಾಜ ಅಧ್ಯಕ್ಷತೆಯಲ್ಲಿ ಮಂಗಳವಾರ ಪಿಸಿ, ಪಿಎನ್​ಡಿಟಿ, ಎಂಟಿಪಿ ಕಾಯ್ದೆ ಪ್ರಗತಿಪರಿಶೀಲನಾ ಸಭೆ ನಡೆಯಿತು.ಡಾ.ರವೀಂದ್ರನಾಥ ಎಂ.ಎಚ್​. ಇದ್ದರು.
Published on

ಕೊಪ್ಪಳ: ಪಿಸಿ, ಪಿಎನ್​ಡಿಟಿಯಡಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ. ಯಾರಾದರೂ ಕಾನೂನು ಬಾಹಿರವಾಗಿ ನಡೆದುಕೊಂಡಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್​ಒ ಡಾ.ಟಿ.ಲಿಂಗರಾಜು ಹೇಳಿದರು.

ನಗರದ ಡಿಎಚ್​ಒ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಿಸಿ, ಪಿಎನ್​ಡಿಟಿ, ಎಂಟಿಪಿ ಕಾಯ್ದೆ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕಾಯ್ದೆಯಡಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಯಾವುದೇ ಜಾಹಿರಾತು ನೀಡುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ವೈದ್ಯರು ಭಾಗಿಯಾದರೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಯ್ದೆ ತಪಾಸಣೆ, ಮೇಲ್ವಿಚಾರಣೆಗೆ ಸಮಿತಿ ರಚಿಸಲಾಗಿದೆ. ಸಮಿತಿ ಜಿಲ್ಲೆಯ ಸ್ಕಾನಿಂಗ್​ ಸೆಂಟರ್​ಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು. ಎಲ್ಲ ಸ್ಕಾನಿಂಗ್​ ಸೆಂಟರ್​ಗಳು ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು. ಅವಧಿ ಮುಗಿವ ಮೂರು ತಿಂಗಳು ಮುಂಚೆ ಅರ್ಜಿ ಸಲ್ಲಿಸಿ ನವೀಕರಣ ಮಾಡಿಕೊಳ್ಳಬೇಕು. ಸ್ಕಾನಿಂಗ್​ ಕುರಿತ ಮಾರ್ಗಸೂಚಿ ಪಾಲಿಸಬೇಕೆಂದು ಸೂಚಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​. ಮಾತನಾಡಿ, ಮೊದಲ ಬಾರಿ ಅಪರಾಧಕ್ಕೆ 5 ವರ್ಷ ವೈದ್ಯಕಿಯ ಪರವಾನಗಿ ರದ್ದುಪಡಿಸಲಾಗುವುದು. ಅಪರಾಧ ಮುಂದುವರಿಸಿದಲ್ಲಿ ಶಾಶ್ವತವಾಗಿ ಪರವಾನಗಿ ರದ್ದುಗೊಳಿಸಲಾಗುವುದು. ಒಂದು ವೇಳೆ ಮಹಿಳೆ ಅಥವಾ ಅವರ ಕುಟುಂಬಸ್ಥರು ಲಿಂಗ ಪತ್ತೆಗೆ ಯತ್ನಿಸಿದಲ್ಲಿ ಅವರಿಗೂ ಶಿೆ ವಿಧಿಸಲಾಗುವುದೆಂದರು.

ಸಲಹಾ ಸಮಿತಿಗೆ ಮುನಿರಾಬಾದ್​ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞ ಡಾ.ಎಚ್​.ಕೆ.ತೊಗರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮಕ್ಕಳ ತಜ್ಞ ಡಾ.ಗಿರೀಶ, ರೆಡಿಯಾಲಜಿಸ್ಟ್​ ಡಾ.ದಯಾನಂದಸ್ವಾಮಿ, ಯುನಿಸೆಫ್​ ಮಕ್ಕಳ ರಕ್ಷಣಾ ಯೋಜನೆಯ ಹರೀಶ್​ ಜೋಗಿ, ವಕೀಲ ಶಂಕರ್​ ಬಿಸರಳ್ಳಿ, ಎನ್​.ಜಿ.ಓ.ಗಳ ಪ್ರತಿನಿಧಿ ಡಾ.ವಿಶ್ವನಾಥ ಬಸವರಾಜ ನಲ್ವಾಡ, ಶಂಕ್ರಪ್ಪ ಬಿ.ಸುರಳ್​, ರೇಷ್ಮ್ಮಾ ಹಾಗೂ ಸಲೀಮಾ ಜಾನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net