ಅರಸು ಸಾಮಾಜಿಕ ಹರಿಹಾರ

ಅರಸು ಸಾಮಾಜಿಕ ಹರಿಹಾರ
Published on

ಕೊಪ್ಪಳ: ಸರ್ವರಿಗೂ ಸಮಬಾಳು, ಸಮಪಾಲು ನೀಡಿದ ಧೀಮಂತ ನಾಯಕ ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ಜಿಲ್ಲಾಡಳಿತದಿಂದ ನಗರ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಸು ಅವರು ಬಡವ, ಶೋಷಿತರ, ದೀನ ದಲಿತರ, ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಆಡಳಿತ ನೀಡಿದರು. ಅಸ್ಪ-----ೃಶ್ಯತೆ ನಿವಾರಣೆ, ಮುಜರಾಯಿ ದೇವಸ್ಥಾನಗಳಿಗೆ ದಲಿತ ಅರ್ಚಕರ ನೇಮಕ, ಬೆತ್ತಲೆ ಸೇವೆ ನಿಷೇಧ, ಜಾತಿ ನಿಂಧನೆ ಕಾಯ್ದೆ ಜಾರಿಯಂಥ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಜಗಜ್ಯೋತಿ ಬಸವಣ್ಣನವರ ಸಮಾನತೆಯ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡಿದ್ದರು. ಅವರನ್ನು ಒಬ್ಬ ಬಡ ವಿದ್ಯಾರ್ಥಿ ಭೇಟಿಯಾಗಿ, ಬಡತನ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ಮತ್ತು ಊಟಕ್ಕೆ ಸಮಸ್ಯೆಯಿದೆ ಎಂದು ಹೇಳಿಕೊಂಡಾಗ ಹಾಸ್ಟೆಲ್​ ಮಂಜೂರಿಸಿ ಸ್ಥಳದಲ್ಲಿಯೇ ಪರಿಹಾರ ನೀಡಿದ್ದರು ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಜನಪರ ಕೆಲಸ, ಜನಮನದ ಅರಸು ಎಂದರೆ ದೇವರಾಜ ಅರಸರು. ಅವರು ತಬ್ಬಲಿ ಜಾತಿಗಳ ತಂದೆ. ಹಲವು ಸವಾಲುಗಳನ್ನು ಎದುರಿಸಿ ಹಿಂದುಳಿದ, ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಆದರ್ಶ ರಾಜಕಾರಣಿಯಾಗಿದ್ದರು. ಅವರ ಕಾಲವಧಿ ಬಡ, ಹಿಂದುಳಿದ, ಶೋಷಿತ ವರ್ಗಗಳ ಪಾಲಿಗೆ ಸುವರ್ಣಯುಗವಾಗಿತ್ತು. ಮಲ ಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧ, ಭೂ ಒಡೆತನ ಯೋಜನೆ ಜಾರಿ ಮಾಡಿದರು ಎಂದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಉಪನ್ಯಾಸ ನೀಡಿದರು. ಗವಿಸಿದ್ದೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ಡಿ.ದೇವರಾಜ ಅರಸು ಭಾವಚಿತ್ರ ಮೆರವಣಿಗೆ ನಡೆಯಿತು. ಗಣ್ಯರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಎಸ್ಪಿ ಹೇಮಂತ್​ ಕುಮಾರ್​, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಸುರೇಶ ಕೋಕರೆ, ಮ್ಯಾನೇಜರ್​ ಬಿ.ವಿ.ಮಠ, ತಾಲೂಕು ಅಧಿಕಾರಿ ನಾಗರತ್ನಾ, ವಿಸ್ತರಣಾಧಿಕಾರಿ ಎಚ್​.ಕೆ.ಬೆಟಗೇರಿ, ತಹಸೀಲ್ದಾರ್​ ವಿಠ್ಠಲ ಚೌಗಲಾ, ಪ್ರಾಚಾರ್ಯ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net