ಜಿಲ್ಲಾಡಳಿತದಿಂದ ಮನ್ವಂತರ ಕಾರ್ಯಕ್ರಮ: ಡಿಸಿ ವಿಕಾಸ್ ಕಿಶೋರ್ ಹೇಳಿಕೆ, ಕೊಪ್ಪಳದಲ್ಲಿ ಪರಿಸರ ಜಾಗೃತಿ ಸಪ್ತಾಹ

10062022 koppal Environmental day
Published on

ಕೊಪ್ಪಳ: ಇಂದಿನ ಯುವಕರೇ ನಾಳಿನ ಪ್ರಜೆಗಳು. ಪರಿಸರ ರಕ್ಷಣೆಯಲ್ಲಿ ಯುವಕರ ಪಾತ್ರ ಬಹುಮುಖ್ಯ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದರು.

ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪರಿಸರ ದಿನದ ಅಂಗವಾಗಿ ಇಲಾಖೆಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪರಿಸರ ರಕ್ಷಣೆ ಎಂಬುದು ಆಚರಣೆಗೆ ಸೀಮಿವಾಗದೆ ನಿತ್ಯ ಜೀವನದ ಭಾಗವಾಗಬೇಕು. ಸದ್ಯ ಇರುವ ಹಸಿರು ವಾತಾವರಣವನ್ನು ಇನ್ನಷ್ಟು ಹೆಚ್ಚಿಸಬೇಕು. ಅದರಿಂದ ನಮ್ಮ ಬದುಕು ಸ್ವಚ್ಛವಾಗಲಿದೆ. ಪರಿಸರ ಮಾಲಿನ್ಯ ಆಗದಂತೆ ನೋಡಿಕೊಳ್ಳೋಣ. ನಾವು ಎಷ್ಟರ ಮಟ್ಟಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಾಧ್ಯವಾಗುತ್ತದೆಯೋ ಅಷ್ಟನ್ನೂ ಪ್ರಯತ್ನಿಸೋಣ ಎಂದರು.

ಮನ್ವಂತರ-2 ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಮುಂಬರುವ ದಿನಗಳಲ್ಲಿ ಆಯೋಜಿಸಲಾಗುವುದು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ಓದಿ ಅದರ ವಿಮರ್ಶೆ ಬರೆದುಕಳುಹಿಸಲು ಯೋಜನೆ ರೂಪಿಸಲಾಗಿದೆ. ವಿಜೇತ ಮೂವರಿಗೆ ಪ್ರಥಮ 20 ಸಾವಿರ ರೂ., ದ್ವಿತೀಯ 10 ಸಾವಿರ ರೂ., ತೃತೀಯ 5 ಸಾವಿರ ರೂ. ನಗದು ಬಹುಮಾನ ವಿತರಿಸಲಾಗುವುದು. ಇಂಗ್ಲಿಷ್ ಪುಸ್ತಕಓದಿ ಅದರ ವಿಮರ್ಶೆ ಬರೆದ ಒಬ್ಬ ವಿದ್ಯಾರ್ಥಿಗೆ 15 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಈ ಅವಕಾಶವನ್ನು ವಿದ್ಯಾರ್ಥಿಗಳು ಸದಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜಿಟಿಟಿಸಿ ಕಾಲೇಜಿನ ಪ್ರಾಚಾರ್ಯ ಸುರೇಶ ರಾಥೋಡ್, ಡಾ.ಕರಿಬಸವೇಶ್ವರ, ಟ್ರಸ್ಟ್ ಕಾರ್ಯದರ್ಶಿ ಆರ್.ಮರೆಗೌಡ್ರು, ಜಿಲ್ಲಾ ಪರಿಸರ ಅಧಿಕಾರಿ ಎಸ್.ಸಿ ಸುರೇಶ, ಅಭಿನವಶ್ರೀ ಸಿದ್ಧೇಶ್ವರ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಆನಂದ ಹಳ್ಳಿಗುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net