

ಕೊಪ್ಪಳ: ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆವ ಲೈಂಗಿಕ ಕಿರುಕುಳ ತಡೆಯಲು ಜಿಲ್ಲಾ ಮಟ್ಟದ ಸಮಿತಿ ಮರು ರಚಿಸಿ ಡಿಸಿ ನಲಿನ್ ಅತುಲ್ ಆದೇಶಿಸಿದ್ದಾರೆ.
ಕೊಪ್ಪಳ ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕಿ ಭಾರತಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚನೆಯಾಗಿದೆ. ಹಿಟ್ನಾಳ ಹೋಬಳಿ ಉಪ ತಹಸೀಲ್ದಾರ್ ರೇಖಾ ದೀತ್, ಯಲಬುರ್ಗಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸರೋಜ ಬಾಕಳೆ, ಕೊಪ್ಪಳ ಇನ್ನರವೀಲ್ ಕ್ಲಬ್ನ ತ್ರಿಶಲಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೆಷನ್ ಅಧಿಕಾರಿ ಶಿವಲೀಲಾ ವನ್ನೂರು, ಯುನಿಸೆಫ್ ಕಾರ್ಯಕ್ರಮ ವ್ಯವಸ್ಥಾಪಕರಾದ ಹರೀಶ್ ಜೋಗಿ ಹಾಗೂ ಜಿಲ್ಲೆಯ 7 ತಾಲೂಕಿನ ತಹಸೀಲ್ದಾರ್ಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.