

ಕೊಪ್ಪಳ: ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಜನರ ಮೇಲೆ ಹೆಚ್ಚು ದೌರ್ಜನ್ಯ ನಡೆವ ಪ್ರದೇಶಗಳನ್ನು ಗುರುತಿಸಿ. ಅಲ್ಲಿ ನಿಯಂತ್ರಣ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪೊಲೀಸ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ. ಕಾನೂನು ಅರಿವು ಮೂಡಿಸಿ. ದೌರ್ಜನ ನಿಯಂತ್ರಿಸಿ. ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ. ದೌರ್ಜನ್ಯ ಹೆಚ್ಚು ನಡೆಯುವೆಡೆ ಗಮನಹರಿಸಿ. ನಿಯಂತ್ರಣ ಸಾಧಿಸಿ. ಜಿಲ್ಲೆಯ ಯಾವುದೇ ಭಾಗದಲ್ಲಿ ಎಸ್ಸಿ, ಎಸ್ಟಿ ಜನರ ಮೇಲೆ ದೌರ್ಜನ್ಯ ನಡೆದಲ್ಲಿ ರಕ್ಷಣ ದೂರು ದಾಖಲಿಸಿ. ಅಗತ್ಯ ವೈದ್ಯಕಿಯ ಸೇವೆ ನೀಡಿ. ರಕ್ಷಣೆ ಜತೆಗೆ ನಿಯಮಾನುಸಾರ ಸಂತ್ರಸ್ತರಿಗೆ ಪರಿಹಾರ ಒದಗಿಸಿ. ಅನಗತ್ಯ ತೊಂದರೆ, ವಿಳಂಬ, ರ್ನಿಲಕ್ಷ$್ಯ ಮಾಡಬೇಡಿ ಎಂದು ತಾಕೀತು ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ ಮಾತನಾಡಿ, ಪ್ರಸಕ್ತ ವರ್ಷ 51 ಪ್ರಕರಣಗಳಲ್ಲಿ 47.37 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ. ಚಾರ್ಜ್ ಶೀಟ್ ಹಂತದಲ್ಲಿನ 33 ಪ್ರಕರಣಗಳಿಗೆ 73 ಲಕ್ಷ ರೂ. ನೀಡಲಾಗಿದೆ. 2 ಪ್ರಕರಣದಲ್ಲಿ ಮೃತ ಸಂತ್ರಸ್ತರ ಕುಟುಂಬಕ್ಕೆ 4.12ಲಕ್ಷ ರೂ. ಪರಿಹಾರ ವಿತರಿಸಿದ್ದೇವೆ. ಯಾವುದೇ ವಿಳಂಬ ಆಗಿಲ್ಲವೆಂದರು. ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ವಿವಿಧ ಇಲಾಖೆ ಅಧಿಕಾರಿಗಳು ಜಾಗೃತಿ ಸಮಿತಿ ಸದಸ್ಯರಿದ್ದರು.