

ಕೊಪ್ಪಳ: ಪಜಾ, ಪಪಂ ವರ್ಗದ ಅರ್ಹ ಲಾನುಭವಿಗಳಿಗೆ ಅವಧಿಯೊಳಗೆ ಸರ್ಕಾರಿ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಎಸ್ಸಿ&ಎಸ್ಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಗುರುವಾರ ಮಾತನಾಡಿದರು.
ಎಲ್ಲ ಇಲಾಖೆಗಳು, ನಿಗಮಗಳಿಗೆ ಎಸ್ಸಿಪಿ&ಟಿಎಸ್ಪಿ ಯೋಜನೆಯಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿ ಗುರಿ ನಿಗದಿಪಡಿಸಿದೆ. ಪಜಾ, ಪಪಂ ವರ್ಗದ ಲಾನುಭವಿಗಳಿಗೆ ಇಲಾಖೆವಾರು ಇರುವ ಸೌಲಭ್ಯಗಳ ಮಾಹಿತಿ ಸಂಗ್ರಹಿಸಿ. ಲಾನುಭವಿಗಳನ್ನು ಗುರುತಿಸಿ ಯೋಜನೆ ತಲುಪಿಸಿ. ವಿವಿಧ ಏಜೆನ್ಸಿಗಳ ಮೂಲಕ ನಿರ್ಮಿಸುತ್ತಿರುವ ಕಟ್ಟಡಗಳು, ಸಮುದಾಯ ಭವನಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ. ಅನುದಾನ ಬಿಡುಗಡೆಯಾದ ದಿನಾಂಕ, ಫಲಾನುಭವಿಗಳಿಗೆ ತಲುಪಿಸಿದ ದಿನಾಂಕ, ರ್ಖಚಾದ ಮೊತ್ತ, ಬಾಕಿ ಉಳಿದಿರುವ ಅನುದಾನವನ್ನು ಕಾರಣ ಸಹಿತ ಮಾಹಿತಿ ನೀಡಿ ಎಂದು ತಿಳಿಸಿದರು.
ಲಾನುಭವಿ ಆಧಾರಿತ ಯೋಜನೆಗೆ ಆದ್ಯತೆ ನೀಡಿ. ಅನುದಾನ ಸಮಪರ್ಕವಾಗಿ ಬಳಸಿ. ಆಗ ಪ್ರಗತಿ ಸಾಧ್ಯ ಎಂದರು. ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ, ಡಿಡಿಪಿಯು ಜಗದೀಶ ಇತರರಿದ್ದರು.