ಗುಣಮಟ್ಟ ಸಂವೇದನಾಶೀಲ ತರಬೇತಿ ಕಾರ್ಯಕ್ರಮ

koppal dc naleen athul meeting with officers
ಕೊಪ್ಪಳದಲ್ಲಿ ಬುಧವಾರ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಭಾರತೀಯ ಗುಣಮಟ್ಟ ಕುರಿತ ಸಂವೇದನಾಶೀಲ ತರಬೇತಿ ಕಾರ್ಯಕ್ರಮ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು. ಎಡಿಸಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಆಹಾರ ಇಲಾಖೆ ಉಪನಿರ್ದೇಶಕ ಚಿದಾನಂದ, ಬಿಐಎಸ್​ನ ಮರ್ಸಿರಾಣಿ, ಮಹ್ಮದ್​ ಅಹ್ಮದ್​ ಇತರರಿದ್ದರು.
Published on

ಕೊಪ್ಪಳ: ಭಾರತೀಯ ಮಾನಕ ಬ್ಯೂರೋ(ಬಿಐಎಸ್​)ದಿಂದ ಭಾರತೀಯ ಗುಣಮಟ್ಟ ಕುರಿತ ಸಂವೇದನಾಶೀಲ ತರಬೇತಿ ಕಾರ್ಯಕ್ರಮ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಸಾರ್ವಜನಿಕ ಸಂಗ್ರಹಣೆಯಲ್ಲಿ ಗುಣಮಟ್ಟ, ಸರ್ಕಾರದ ಯೋಜನೆಗಳು, ಕಾಮಗಾರಿಗಳು, ಗ್ರಾಹಕ ವಸ್ತುಗಳ ಗುಣಮಟ್ಟ, ಆರೋಗ್ಯ ಸೇವೆಯ ಗ್ರಾಹಕ ವಸ್ತುಗಳು, ಉತ್ಪನ್ನಗಳು, ಸುರಕ್ಷತಾ ವಸ್ತುಗಳ ಗುಣಮಟ್ಟ, ಉಪಕರಣಗಳ ಪ್ರಮಾಣಿತ ಗುಣಮಟ್ಟ, ಸುಧಾರಣೆ ಹಾಗೂ ವಿವಿಧ ವಿಷಯಗಳ ಕುರಿತು ಬಿಐಎಸ್​ ಅಧಿಕಾರಿಗಳು ತಿಳಿಸಿದರು. ಐ.ಎಸ್​.ಐ, ಹಾಲ್​ ಮಾರ್ಕ್​, ಎಫ್​.ಎಸ್​.ಎಸ್​.ಐ ಹಾಗೂ ನಿತ್ಯ ಬಳಕೆ ವಸ್ತುಗಳಾದ ಗ್ಯಾಸ್​ ಸಿಲಿಂಡರ ಮತ್ತು ಅದರ ಬಿಡಿ ಭಾಗಗಳು, ಮೊಬೈಲ್​ ಮತ್ತು ಎಲೆಕ್ಟ್ರಾನಿಕ್​ ವಸ್ತುಗಳ ಹಾಗೂ ಚಿನ್ನ ಖರೀದಿಸುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಅರಿವು ಮೂಡಿಸಿದರು.

ಉತ್ಪನ್ನಗಳ ಗುಣಮಟ್ಟ ಅರಿಯಲು ಬಿಐಎಸ್​ ಕೇರ್​ ಆ್ಯಪ್​ ಅನ್ನು ್ಲೇ ಸ್ಟೋರ್​ನಿಂದ ಡೌನ್​ಲೋಡ್​ ಮಾಡಬಹುದು. ಉತ್ಪನ್ನಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಉತ್ಪಾದಕರ ವಿಳಾಸ, ದೂರು ನೀಡಲು ಆ್ಯಪ್​ ಸಹಕಾರಿ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆವಹಿಸಿದ್ದರು. ಎಡಿಸಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಆಹಾರ ಇಲಾಖೆ ಉಪನಿರ್ದೇಶಕ ಚಿದಾನಂದ, ಬಿಐಎಸ್​ನ ಮರ್ಸಿರಾಣಿ, ಮಹ್ಮದ್​ ಅಹ್ಮದ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net