

ಕೊಪ್ಪಳ: ಜಿಲ್ಲೆಯ ಅರಣ್ಯ ಪ್ರದೇಶಗಳನ್ನು ರಸಿ. ಇದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪರಿಭಾವಿತ ಅರಣ್ಯ ಪ್ರದೇಶ ಸಂಬಂಧ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಅಕ್ರಮಿತ ಅರಣ್ಯ ಪ್ರದೇಶ ತೆರವುಗೊಳಿಸಬೇಕಿದೆ. ಜಿಲ್ಲೆಯಲ್ಲಿನ ಒಟ್ಟು ಅರಣ್ಯ ಪ್ರದೇಶ ಗುರುತಿಸಿ. ತಹಸೀಲ್ದಾರ್ಗಳು, ಭೂದಾಖಲೆಗಳ ನಿರ್ದೇಶಕರು, ಅರಣ್ಯಾಧಿಕಾರಿಗಳು ತಾಲೂಕುವಾರು ಜಂಟಿ ಸರ್ವೇ ನಡೆಸಿ. ಅರಣ್ಯ ಪ್ರದೇಶ ಗುರುತಿಸಿ ವರದಿ ಸಲ್ಲಿಸಿ. ಯಾವುದೇ ಅತಿಕ್ರಮ ಕಂಡುಬಂದಲ್ಲಿ ನಿಯಮಾನುಸಾರ ತೆರವುಗೊಳಿಸಿ. ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪರಿಭಾವಿತ ಅರಣ್ಯ ಪ್ರದೇಶ ಬಗ್ಗೆ ಗಮನಹರಿಸಿ. ಸರ್ವೇ ನಂಬರ್ ಸಂಪೂರ್ಣ ಅರಣ್ಯ ಪ್ರದೇಶವಾಗಿದ್ದಲ್ಲಿ ಅಥವಾ ಯಾವುದೇ ವಿವಾದಗಳಿಲ್ಲದಿದ್ದಲ್ಲಿ ತಾಲೂಕು ಮಟ್ಟದಲ್ಲಿ ಸ್ಥಳಿಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಿ. ಕಂದಾಯ ದಾಖಲೆಗಳಲ್ಲಿ ಇಂಡೀಕರಣ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲಾನ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪರಿಭಾವಿತ ಅರಣ್ಯ ಪ್ರದೇಶ ಮಾಹಿತಿಯನ್ನು ವೆಬ್ಸೈಟ್ https://aranya.gov.in/aranyacms ನಲ್ಲಿ ಲಭ್ಯವಿದೆ. ಈ ಮಾಹಿತಿಯಲ್ಲಿರುವ ಸರ್ವೇ ನಂಬರ್ಗಳ ಮೂಲಕ ಆಯಾ ತಾಲೂಕು ತಹಸೀಲ್ದಾರ್ಗಳು, ಭೂ ದಾಖಲೆಗಳ ನಿರ್ದೇಶಕರು, ಅರಣ್ಯಾಧಿಕಾರಿಗಳು ಗಡಿ ಗುರುತಿಸಬೇಕೆಂದು ಸೂಚಿಸಿದರು. ಭೂ ದಾಖಲೆಗಳ ಇಲಾಖೆ ಹಾಗೂ ಅರಣ್ಯಾಧಿಕಾರಿಗಳಿದ್ದರು.