ಕೊಪ್ಪಳ: ಇಂದು ವಿವಿಧ ಇಲಾಖೆಗಳ ಗ್ರೂಪ್ ಎ, ಬಿ ವೃಂದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀೆ ನಡೆಯಲಿದ್ದು, ಅಭ್ಯರ್ಥಿಗಳು ಕಡ್ಡಾಯವಾಗ ಪರೀಕ್ಷಾ ನಿಯಮ ಪಾಲಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗ ಕೊಪ್ಪಳ ನಗರ ಮತ್ತು ಭಾಗ್ಯನಗರದ 18 ಕೇಂದ್ರಗಳಲ್ಲಿ ಪರೀಕ್ಷ ನಡೆಸಲಿದೆ. 5,611 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಬೆಳಗ್ಗೆ 10 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಗೆ ಪರೀೆ ಆರಂಭವಾಗಲಿದೆ. ಪರೀೆ ಆರಂಭಕ್ಕೂ ಮುನ್ನ 2 ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಕಡ್ಡಾಯವಾಗಿ ಪರೀಾ ಕೇಂದ್ರದಲ್ಲಿರಬೇಕು. ಕೆಪಿಎಸ್ಸಿ ನಿಯಮದಂತೆ ವಸ್ತ್ರಸಂಹಿತೆ ಪಾಲಿಸುವಂತೆ ನಿರ್ದೇಶಿಸಿದ್ದಾರೆ.
ಕೊಪ್ಪಳ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಉಪ ಕೇಂದ್ರ 1ರಲ್ಲಿ ದೈಹಿಕ ವಿಕಲಚೇತನ ಅಭ್ಯರ್ಥಿಗಳು ಪರೀೆಗೆ ಬರೆಯಲಿದ್ದಾರೆ. ಎಲ್ಲ ಪರಿಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಇರಲಿದೆ. ಪರೀೆಗೆ ಕೆಪಿಎಸ್ಸಿ ನೀಡಿದ ನಿಯಮಾವಳಿ, ಸೂಚನೆ ಪಾಲಿಸುವುದು ಕಡ್ಡಾಯ. ಕೇಂದ್ರಕ್ಕೆ ಯಾವುದೆ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ ಎಂದು ಸೂಚಿಸಿದ್ದಾರೆ.