

ಕೊಪ್ಪಳ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಯಶಸ್ವಿಗೊಳಿಸಲು ವಿವಿಧ ಸಮಿತಿ ರಚಿಸಿರುವುದಾಗಿ ಡಿಸಿ ನಲಿನ್ ಅತುಲ್ ತಿಳಿಸಿದ್ದಾರೆ.
ಸೆ.15ರಂದು ಬೆಳಗ್ಗೆ 8ರಿಂದ 9.30ವರೆಗೆ ಬೆಳಗಟ್ಟಿ ಗ್ರಾಮದಿಂದ ಮುನಿರಾಬಾದ್ ಡ್ಯಾಂ ವರೆಗೆ 53 ಕಿ.ಮೀ. ಮಾನವ ಸರಪಳಿ ರಚಿಸಲಾಗುವುದು. ಇದಕ್ಕಾಗಿ ವಿವಿಧ ಸಮಿತಿ ರಚಿಸಲಾಗಿದೆ.
ಎಸಿ ನೇತೃತ್ವದಲ್ಲಿ ಸಾರಿಗೆ ಸಮಿತಿ ರಚಿಸಿದ್ದು, ಮಾನವ ಸರಪಳಿ ನಿರ್ಮಿಸಿರುವ ಸ್ಥಳಕ್ಕೆ ಶಾಲಾ&ಕಾಲೇಜು ವಿದ್ಯಾರ್ಥಿಗಳನ್ನು ಕರೆತಂದು ಕಾರ್ಯಕ್ರಮ ಮುಗಿದ ನಂತರ ವಾಪಸ್ ಕರೆದೊಯ್ಯಬೇಕು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಮಹಿಳಾ ಒಕ್ಕೂಟಗಳ ಸದಸ್ಯರು, ಗೃಹಲಕ್ಷಿ$್ಮ ಫಲಾನುಭವಿಗಳಿಗೆ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಿ. ಆಹಾರ ಸಮಿತಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕುಡಿವ ನೀರು, ಅಲ್ಪ ಉಪಾಹಾರ ನೀಡಿ. ಸುರಕ್ಷತಾ ಸಮಿತಿ ಮಾನವ ಸರಪಳಿ ಆರಂಭದಿಂದ ಅಂತ್ಯದವರೆಗೆ ಭದ್ರತೆ ಒದಗಿಸಿ. ಆರೋಗ್ಯ ಸಮಿತಿ ಪ್ರತಿ 5 ಕಿ.ಮೀ.ಒಂದರಂತೆ ಅಗತ್ಯ ಆ್ಯಂಬುಲೆನ್ಸ್ ನಿಲ್ಲಿಸಿ. ವೈದ್ಯಕಿಯ ಕಿಟ್ನೊಂದಿಗೆ ಮಹಿಳಾ ಶುಶ್ರೂಷಕರನ್ನು ನೇಮಿಸಿ. ನೈರ್ಮಲೀಕರಣ ಶುಚಿತ್ವ ಸಮಿತಿ ಮಾನವ ಸರಪಳಿ ನಿರ್ಮಿಸುವ ಸ್ಥಳ ಸ್ವಚ್ಛಗೊಳಿಸುವಂತೆ ತಿಳಿಸಲಾಗಿದೆ.
ಪ್ರಚಾರ ಸಮಿತಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೈಗೊಳ್ಳಿ. ಕಾರ್ಯಕ್ರಮ ಆರಂಭದಿಂದ ಮುಕ್ತಾಯದವರೆಗೆ ಜಿಲ್ಲಾ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಳ್ಳಿ. ಎಲ್ಲ ಸಮಿತಿಗಳು ಸರಿಯಾಗಿ ಜವಾಬ್ದಾರಿ ನಿಭಾಯಿಸಿ. ರ್ನಿಲಕ್ಷ$್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.