ತಾಲೂಕು ಮಟ್ಟದ ನೋಡಲ್​ ಅಧಿಕಾರಿಗಳ ನೇಮಕ

Published on

ಕೊಪ್ಪಳ : ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆವ ಲೈಂಗಿಕ ಕಿರುಕುಳ ತಡೆಯಲು ಜಿಲ್ಲೆಯ 7 ತಾಲೂಕುಗಳ ತಹಸೀಲ್ದಾರರನ್ನು ತಾಲೂಕು ಮಟ್ಟದ ನೋಡಲ್​ ಅಧಿಕಾರಿಗಳೆಂದು ನೇಮಿಸಿ ಜಿಲ್ಲಾಧಿಕಾರಿ ನಲಿನ್​ ಅತುಲ್​ ಆದೇಶಿಸಿದ್ದಾರೆ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿ 7 ದಿನಗಳೊಳಗಾಗಿ ಸ್ಥಳಿಯ ಸಮಿತಿಗೆ ಕಳುಹಿಸಬೇಕು. ನೋಡಲ್​ ಅಧಿಕಾರಿಗಳು ಸ್ವೀಕೃತವಾಗಿರುವ ಲೈಂಗಿಕ ಕಿರುಕುಳದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಥವಾ ಸಂಸ್ಥೆಗೆ ವಿಚಾರಣೆಗಾಗಿ ಕಳುಹಿಸುವುದು ಮತ್ತು "ಖಏಛಿ-ಆಟ್ಡ" ಇ-&ಪೋರ್ಟಲ್​ನಲ್ಲಿ ಅಪ್​ಡೇಟ್​ ಮಾಡಬೇಕು. ಲೈಂಗಿಕ ಕಿರುಕುಳ ನಡೆಯದಂತೆ ವ್ಯಾಪಕ ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net