ಬೆಳೆ ಅಂದಾಜು ಸಮೀಕ್ಷೆ ಅಚ್ಚುಕಟ್ಟಾಗಿ ನಡೆಸಿ

koppal crop survey adc sidrameswara
Published on

ಕೊಪ್ಪಳ: ಪ್ರಸಕ್ತ ಸಾಲಿನ ಮುಂಗಾರು ಬೆಳೆ ಅಂದಾಜು ಸಮೀೆ ನಿಯಮಾನುಸಾರ ಅಚ್ಚುಕಟ್ಟಾಗಿ ನಡೆಸಿ ಎಂದು ಎಡಿಸಿ ಸಿದ್ರಾಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಹಮ್ಮಿಕೊಂಡಿದ್ದ ಸಮೀೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮೂಲ ಕಾರ್ಯಕರ್ತರೇ ತೆರಳಿ ಸಮೀೆ ನಡೆಸಿ. ರೈತರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಬೆಳೆ ಕಟಾವು ಸಮೀೆ ನಮಗಷ್ಟೇ ಅಲ್ಲ, ರಾಜ್ಯ, ದೇಶಕ್ಕೆ ಅನುಕೂಲ. ಯಾವ ಬೆಳೆ, ಕ್ಷೇತ್ರ ಇನ್ನಿತರ ಮಾಹಿತಿ ಸುಲಭಕ್ಕೆ ಸಿಗಲಿದೆ. ಅದನ್ನು ಆಧರಿಸಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿವಿಧ ಯೋಜನೆ ರೂಪಿಸಲು ಸಹಕಾರಿ. ಜನಗಣತಿಯಂತೆ ಬೆಳೆ ಸಮೀೆ. ಬೆಳೆ ಇದ್ದರೂ ಸಮೀೆ ಮಾಡದೆ ನಷ್ಟ ಮಾಡಬೇಡಿ. ಹಾಗೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬರೂ ಜಾಗರೂಕತೆ ಹಾಗೂ ಪ್ರಾಮಾಣಿಕವಾಗಿ ಸಮೀೆ ನಡೆಸುವಂತೆ ತಾಕೀತು ಮಾಡಿದರು.

ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ಬೆಳೆ ಕಟಾವು ಸಮೀೆ ರೈತರ ಆರ್ಥಿಕ ಪ್ರಗತಿಗೆ ಪೂರಕ. ಯಾವುದೇ ಸಂದರ್ಭದಲ್ಲಿಯೂ ಕಟಾವು ಪ್ರಯೋಗಗಳು ವ್ಯರ್ಥವಾಗದಂತೆ ನೋಡಿಕೊಳ್ಳಿ. ಇಲಾಖಾವಾರು ಅಧಿಕಾರಿಗಳ ಮಾಹಿತಿ ಆಧರಿಸಿ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿದೆ. ಮೂಲಕಾರ್ಯಕರ್ತರು ಮೊಬೈಲ್​ ಮೂಲಕ ಸಮೀಕ್ಷೆ ಮಾಡಬಹುದು ಎಂದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುಧಾಕರ ಮಾನೆ ಮಾತನಾಡಿ, ಸಮೀೆಗೆ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಪಂಚಾಯತ್​ ರಾಜ್​ ಇಲಾಖೆ ಅಧಿಕಾರಿಗಳು ಮೂಲ ಕಾರ್ಯಕರ್ತರಾಗಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳನ್ನು ಮೇಲ್ವಿಚಾರಣಾ ಅಧಿಕಾರಿಗಳೆಂದು ನೇಮಿಸಲಾಗಿದೆ. ಅವರು ಮೂಲ ಕಾರ್ಯಕರ್ತರು ಬೆಳೆ ಸಮೀಕ್ಷೆ ತೆಗೆದುಕೊಂಡಿದ್ದಾರೆಯೇ ಎಂದು ಕಡ್ಡಾಯವಾಗಿ ಪರೀಸಬೇಕು. ಬೆಳೆ ವಿಮೆ ತುಂಬಿದ ಕನಿಷ್ಠ ಮೂವರು ರೈತರನ್ನು ಸಮೀೆ ಕಡ್ಡಾಯವಾಗಿ ಕರೆದೊಯ್ಯುವಂತೆ ಸಲಹೆ ನಿಡಿದರು.

ಬಳ್ಳಾರಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಕೇಶ ಕಟಾವು ಸಮೀೆ ಕೈಗೊಳ್ಳುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿದರು. ತಹಸೀಲ್ದಾರ್​ಗಳು, ಕಂದಾಯ, ಕೃಷಿ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net