ಕರೊನಾ ಹೆಮ್ಮಾರಿಗೆ ಸ್ವಾಮೀಜಿಯ 19 ವರ್ಷದ ಪುತ್ರ ಬಲಿ: ಕೊಪ್ಪಳ ಜಿಲ್ಲೆಯಲ್ಲಿ ಆವರಿಸಿದ ಆತಂಕ

Youth Died
Published on

ಕೊಪ್ಪಳ: ಮಹಾಮಾರಿ ಕರೊನಾ ಸೋಂಕಿಗೆ 19 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 20 ವರ್ಷದೊಳಗಿನ ಯುವಕ, ಮೊದಲ ಸಾವು ಇದಾಗಿದ್ದು, ಜನರನ್ನು ಆತಂಕಕ್ಕೆ ದೂಡಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಪ್ರಸಾದ್​ (19) ಮೃತ ಯುವಕ. ಈತ ‌ಪ್ರಸಿದ್ಧ ಸೂಳೆಕಲ್ ಬೃಹನ್ಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರ ಎರಡನೇ ಪುತ್ರ.

ಕರೊನಾ ಸೋಂಕಿಗೆ ಒಳಗಾಗಿದ್ದ ಪ್ರಸಾದ್​ ಕಳೆದ 10 ದಿನದಿಂದ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಪ್ರಸಾದ್​ ಕೊನೆಯುಸಿರೆಳೆದಿದ್ದಾರೆ.

ಕರೊನಾ ಎರಡನೇ ಅಲೆಯಲ್ಲಿ ಯುವಕರ ಸಾವಿನ ಸಂಖ್ಯೆಯು ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 19 ವರ್ಷ ವಯಸ್ಸಿನೊಳಗೆ ಮೃತಪಟ್ಟ ಮೊದಲ ಯುವಕನಾಗಿದ್ದು, ಹೆಮ್ಮಾರಿಯ ಅಟ್ಟಹಾಸಕ್ಕೆ ಕೊಪ್ಪಳ ಜನತೆ ಬೆಚ್ಚಿಬಿದ್ದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net