ಕರೊನಾದಿಂದ ಚೇತರಿಸಿಕೊಂಡ ಮೂವರ ಬಿಡುಗಡೆ

Koppal Covid 19 People Release
ಕರೊನಾದಿಂದ ಚೇತರಿಸಿಕೊಂಡ ಮೂವರನ್ನು ಸೋಮವಾರ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
Published on

ಕೊಪ್ಪಳ: ಕರೊನಾದಿಂದ ಚೇತರಿಸಿಕೊಂಡ ಮೂವರನ್ನು ಸೋಮವಾರ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮುಂಬೈನಿಂದ ಆಗಮಿಸಿ ಕರೊನಾಗೆ ತುತ್ತಾಗಿದ್ದ ಗಂಗಾವತಿಯ ಮೂರು ವರ್ಷದ ಬಾಲಕ ಸೇರಿ 28 ವರ್ಷದ ಮಹಿಳೆ ಹಾಗೂ 31 ವರ್ಷದ ಪುರುಷ ಬಿಡುಗಡೆಯಾದವರು. ಮೂವರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ನಿಯಮದಂತೆ ಬೀಳ್ಕೊಡಲಾಯಿತು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ನೀಡಿ, ಚಪ್ಪಾಳೆ ತಟ್ಟುವ ಮೂಲಕ ಕರೊನಾ ಗೆದ್ದವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಕಳುಹಿಸಿದರು.

ಲಾಕ್ ಡೌನ್ ನಿಂದಾಗಿ ಜಿಲ್ಲೆಯಲ್ಲಿ ಸಿಲುಕಿದ್ದ ಅಂತಾರಾಜ್ಯ ಕಾರ್ಮಿಕರನ್ನು ಹಂತ ಹಂತವಾಗಿ ಅವರ ಸ್ವಗ್ರಾಮಗಳಿಗೆ ಕಳಿಸಲಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ 178 ಜನರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಅವರು ಸೇರಿ ಓಡಿಸ್ಸಾ, ಬಿಹಾರ, ಆಂಧ್ರಪ್ರದೇಶ, ಛತ್ತಿಸ್ ಘಡ, ಜಾರ್ಖಂಡ್, ಪಶ್ಚಿಮ ಬಂಗಾಳದ 4105 ಜನರನ್ನು ವಿಶೇಷ ಬಸ್ ಮತ್ತು ರೈಲಿನ ಮೂಲಕ ಅವರ ಸ್ವಗ್ರಾಮಗಳಿಗೆ ಕಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net