ಪಾರದರ್ಶಕ ಚುನಾವಣೆಗೆ ತರಬೇತಿ ಅವಶ್ಯ

koppal cooperative training programme rkdcc bank
Published on

ಕೊಪ್ಪಳ: ಸಹಕಾರ ಸಂಗಳ ಪಾರದರ್ಶಕ ಚುನಾವಣೆಗೆ ಅಧಿಕಾರಿಗಳಿಗೆ ತರಬೇತಿ ಅವಶ್ಯ ಎಂದು ಆರ್​ಕೆಡಿಸಿಸಿ ಬ್ಯಾಂಕ್​ ಅಧ್ಯಕ್ಷ ವಿಶ್ವನಾಥ ಪಾಟೀಲ್​ ಅಭಿಪ್ರಾಯಪಟ್ಟರು.

ನಗರದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್​ನಿಂದ ಸಹಕಾರ ಸಂಗಳ ಚುನಾವಣಾ ಅಧಿಕಾರಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಗಳಲ್ಲಿ ಪಾರದರ್ಶಕತೆ ಅವಶ್ಯ. ಅದು ಚುನಾವಣೆಯಲ್ಲೂ ಬೇಕು. ಈ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡುತ್ತಿರುವುದು ಉತ್ತಮ ಕೆಲಸವೆಂದರು.

ಜಿಲ್ಲಾ ಸಹಕಾರ ಯೂನಿಯನ್​ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್​ ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್​ ಸಹಕಾರ ಸಂಘಗಳ ಕಾಯ್ದೆಯಲ್ಲಿ ಬದಲಾವಣೆ ವಿಷಯ ಕುರಿತು ತರಬೇತಿ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಜಿಲ್ಲೆಯ ಸಹಕಾರಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.

ಸಹಕಾರ ಶಿಕ್ಷಣಾಧಿಕಾರಿ ಶರಣಬಸಪ್ಪ ಕಾಟ್ರಳ್ಳಿ ಮಾತನಾಡಿ, ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರ ಮೂಲಕ ರಾಜ್ಯದ 47 ಸಾವಿರ ಸಹಕಾರ ಸಂಘಗಳಿಗೆ ಮಾತೃ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸಹಕಾರ ಸಂಘಗಳ ಕಾಯ್ದೆ ಹಾಗೂ ತಿದ್ದುಪಡಿ, ಚುನಾವಣೆಯಲ್ಲಿ ಚುನಾವಣಾ ಪೂರ್ವ ಸಿದ್ಧತೆ (ಮತದಾರರ ಪಟ್ಟಿ ತಯಾರಿ ಕುರಿತು) ರಿಟರ್ನಿಂಗ್​ ಅಧಿಕಾರಿ, ಸಹಾಯಕ ರಿಟರ್ನಿಂಗ್​ ಅಧಿಕಾರಿ, ಪರಿಶೀಲನಾ ಅಧಿಕಾರಿ ಮತ್ತು ಮುಖ್ಯಕಾರ್ಯನಿರ್ವಾಹಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ನಿವೃತ್ತ ಅಪರ ನಿಬಂಧಕ ಐ.ಎಸ್​.ಗಿರಡ್ಡಿ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಉಪನಿಬಂಧಕ ದಸ್ತಗಿರ್​ ಅಲಿ ಉಪನ್ಯಾಸ ನೀಡಿದರು.

ಆರ್​ಕೆಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ್​, ಜಿಲ್ಲಾ ಸಹಕಾರ ಯೂನಿಯನ್​ ಉಪಾಧ್ಯಕ್ಷ ಹಾಲಯ್ಯ ಹುಡೇಜಾಲಿ, ನಿರ್ದೇಶಕರಾದ ಶಕುಂತಲಾ ಹುಡೇಜಾಲಿ, ತೋಟಪ್ಪ ಕಾಮನೂರು, ದಾದಾಪೀರ್​ ಗೋನೆಗೊಂಡಲ, ಮಹಾಂತೇಶ ಸಜ್ಜನ್​, ವೆಂಕಟೇಶ ಶೆಟ್ಟರ್​, ರಾಜೀವ್​ ಮಾದಿನೂರು, ಭೀಮರಡ್ಡಿ ಶ್ಯಾಡ್ಲಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net