ಕೈಗೆ ಸಿಗದ ಅಧಿಕಾರಿಗಳು

Published on

ಕೊಪ್ಪಳ: ನಗರಸಭೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ನಿವಾಸಿಗಳಿಗೆ ಸಮಸ್ಯೆ ಆಗಿದೆ ಎಂದು ನಗರಸಭೆ 16ನೇ ವಾರ್ಡ್​ ಸದಸ್ಯ ಸೋಮಣ್ಣ ಹಳ್ಳಿ ಆರೋಪಿಸಿದರು.

ಪೌರಾಯುಕ್ತ ಹಾಗೂ ಎಇಇಗಳು ಸಿಗುತ್ತಿಲ್ಲ. ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಕಚೇರಿಗೆ ತೆರಳಿದರೆ ಅಲ್ಲಿಯೂ ಇರುವುದಿಲ್ಲ. ಸಭೆ, ಸ್ಥಳ ಪರಿಶೀಲನೆಗೆ ತೆರಳಿರುವುದಾಗಿ ಕಚೇರಿ ಸಿಬ್ಬಂದಿ ಹೇಳುತ್ತಾರೆ. ನಮ್ಮ ವಾರ್ಡಿಗೆ ಯಾವ ಅಧಿಕಾರಿಯೂ ಬಂದಿಲ್ಲ. ಅನೇಕ ಕಾಮಗಾರಿ ನನೆಗುದಿಗೆ ಬಿದ್ದಿವೆ. ಅಧಿಕಾರಿಗಳು ಕೆಲಸ ಮಾಡದೇ ಸಬೂಬು ಹೇಳುತ್ತಿದ್ದಾರೆ. ವಾರ್ಡ್​ ಸದಸ್ಯನಾದ ನನ್ನ ಕೈಗೆ ಅಧಿಕಾರಿಗಳು ಸಿಗುತ್ತಿಲ್ಲ. ಇನ್ನ ಜನರ ಕೈಗೆ ಸಿಗುವುದು ದೂರದ ಮಾತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವೆ. ಅವರೂ ಸ್ಪಂದಿಸದಿದ್ದರೆ ನಗರಸಭೆ ಕಚೇರಿ ಎದುರು ಧರಣಿ ನಡೆಸುವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net