ಕೊಪ್ಪಳಕ್ಕೆ ಸಿಎಂ ಆಗಮನ ನಾಳೆ

01 Siddaramayya
Published on

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಶುಕ್ರವಾರ (ಅ.4) ಕೊಪ್ಪಳ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ಅ.4ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.30ಕ್ಕೆ ಗಿಣಿಗೇರಾ ಖಾಸಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ರಾಯಚೂರು ಜಿಲ್ಲೆ ಸಿಂಧನೂರಿಗೆ ತೆರಳುವರು. ಬಳಿಕ ಸಿಂಧನೂರು ಉತ್ಸವದಲ್ಲಿ ಭಾಗಿಯಾಗುವರು. ಅ.5ರಂದು ರಾಯಚೂರು ಪ್ರವಾಸ ಮುಗಿಸಿಕೊಂಡು ಸಂಜೆ 6.30ಕ್ಕೆ ಗಿಣಿಗೇರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇಲ್ಲಿಂದ ವಿಮಾನ ಮೂಲಕ ಬೆಂಗಳೂರಿಗೆ ತೆರಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net