ಸಂಪುಟದಲ್ಲಿ ಚರ್ಚಸಿ ಒಳ‌ಮೀಸಲು ಜಾರಿ

01 Siddaramayya
Published on
  • ಸಿಎಂ ಸಿದ್ದರಾಮಯ್ಯ ಭರವಸೆ

ಕೊಪ್ಪಳ: ಒಳ ಮೀಸಲಾತಿ ಅನುಷ್ಠಾನ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು.

ಒಳ ಮೀಸಲು ಜಾರಿ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಜಾತಿ ಗಣತಿ ವರದಿ ಸ್ವೀಕಾರ ಮಾಡಿದ್ದೇವೆ. ಜಾರಿ ವಿಷಯವನ್ನೂ ಚರ್ಚಿಸಲಾಗಿದೆ. ಮೊದಲು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ. ಸದನದಲ್ಲೂ ಮಂಡಿಸಲಾಗುವುದು. ಬಳಿಕ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇವೆ.

ಒಂದು ವಾರದಲ್ಲಿ ಜಾರಿ ಮಾಡಲು ಆಗುವುದಿಲ್ಲ. ಈ ಬಗ್ಗೆ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ನನ್ನ ಬಳಿ ಚರ್ಚಿಸಿದ್ದಾರೆ‌‌. ಹಿಂದುಳಿದ ವರ್ಗ ಸಚಿವರ ಬಳಿಯೂ ಚರ್ಚಿಸುವೆ ಎಂದರು.

ಬಿಜೆಪಿ-ಜೆಡಿಎಸ್ ನಾಯಕರಿಗೆ ನಾನು ಅಧಿಕಾರದಲ್ಲಿರುವುದು ಇಷ್ಟವಿಲ್ಲ. ಅವರಿಗೆ ತಾವು ದುರ್ಬಲ‌ ಆಗುತ್ತೇವೆ ಎಂಬ ಭಯ ಇದೆ. ಅದಕ್ಕೆ ನನ್ನ ವಿರುದ್ಧ ಟೀಕಿಸುತ್ತಾರೆ. ಜಿ.ಟಿ.ದೇವೆಗೌಡ ಯಾವ ಪಕ್ಷದವರು ? ಅವರು ಹೇಳಿದ್ದು ಸರಿಯಾಗಿದೆ. ಪ್ರತಿ ವರ್ಷ ದಸರಾ ಕಾರ್ಯಕ್ರಮ ನಡೆಯುತ್ತದೆ. ಮುಂದಿನ ವರ್ಷವೂ ನಾನೇ ಬರುತ್ತೇನೆ. ಅಭಿವೃದ್ಧಿಗೆ ಆಶೀರ್ವಾದ ಮಾಡಲಿ ಎಂದು ಹೇಳಿರುವೆ. ಕೇವಲ ಒಂದು ವರ್ಷ ಅಧಿಕಾರದಲ್ಲಿರುವೆ ಎಂದು ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net