ರಾಜ್ಯಪಾಲರ ವಿರುದ್ಧ ಪ್ರತಿಭಟನೆ

ರಾಜ್ಯಪಾಲರ ವಿರುದ್ಧ ಪ್ರತಿಭಟನೆ
Published on

ಕೊಪ್ಪಳ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿಸಿದ ರಾಜ್ಯಪಾಲ ಥಾವರ ಚಂದ್​ ಗೆಹ್ಲೋತ್​ ಕ್ರಮ ವಿರೋಧಿಸಿ ಸಿದ್ದರಾಮಯ್ಯ ಅಭಿಮಾನಿಗಳು ತಾಲೂಕಿನ ಬೂದಗುಂಪಾ ಬಳಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಫಕೀರಪ್ಪ ಎಮ್ಮಿ ಮಾತನಾಡಿ, ರಾಜ್ಯಪಾಲರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರ ಅಣತಿಯಂತೆ ವರ್ತಿಸುತ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಸಂವಿಧಾನ ಬಾಹಿರ ರ್ನಿಣಯ ಕೈಗೊಂಡಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್​ ಗೆ ಅನುಮತಿ ನೀಡಿರುವುದು ಖಂಡನೀಯ. ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ ಭವನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್​ ಗೆ ನೀಡಿದ ಅನುಮತಿ ವಾಪಸ್​ ಪಡೆಯಬೇಕು. ಇಲ್ಲವಾದರೆ ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಾಂಗ್ರೆಸ್​ ಮುಖಂಡರಾದ ಎ.ವಿ ಗುರುರಾಜ್​, ನಜೀರಸಾಬ ಅರಗಂಜಿ, ಗಿರೀಶ್​ ಹಿರೇಮಠ, ಬಸವರಾಜ ಪೆದ್ಲ, ಸೀಮಣ್ಣ ಗಬ್ಬೂರ, ಕುಬೇರ ಮಜ್ಜಿಗಿ ಮಾತನಾಡಿದರು.

ಪ್ರಮುಖರಾದ ಕರಿಯಪ್ಪ ಸಂಗಟಿ, ದಾಸಪ್ಪ ಕುದರಿಮೋತಿ, ರವಿ ಪೆದ್ಲ, ವೀರೇಶ ಬಡಗಿ, ಮಂಜುನಾಥ ಜೀನಿನ, ಅಮಾಜಪ್ಪ ತುರವಿಹಾಳ, ನಿಂಗಜ್ಜ ಅಡಿಗಿ, ಮಂಜುನಾಥ ಕಾಟ್ರಳ್ಳಿ, ಫಕೀರಪ್ಪ ದೊಡ್ಡಮನಿ, ನಾಗರಾಜ ಕಂಬಳಿ, ಆದೆಪ್ಪ ಇಂದರಗಿ, ಗೋಪಾಲ್​ ಕೂಕನಪಳ್ಳಿ, ಸುರೇಶ್​ ದನಕನದೊಡ್ಡಿ, ಪರಶುರಾಮ ಕೆರೆಹಳ್ಳಿ, ರಮೇಶ್​ ಅಂಜನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net