ವಿಪ್​ ಉಲ್ಲಂಘಿಸಿದವರಿಗೆ ಕ್ರಮವಾಗಲಿ

koppal city municipality council election vip violation bjp
Published on

ಕೊಪ್ಪಳ: ಕೊಪ್ಪಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂಬಂಧಿಸಿದಂತೆ ವಿಪ್​ ಉಲ್ಲಂನೆ ಮಾಡಿದ ಮೂವರು ಸದಸ್ಯರ ವಿರುದ್ಧ ಸದಸ್ಯತ್ವ ಅನರ್ಹಗೊಳಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಬುಧವಾರ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​ಗೆ ಮನವಿ ಸಲ್ಲಿಸಿದರು.

ಚುನಾವಣೆ ವೇಳೆ ಮೂವರು ಸದಸ್ಯರು ವಿಪ್​ ಉಲ್ಲಂಘಿಸಿದ್ದಾರೆ. ಕರ್ನಾಟಕ ಸ್ಥಳಿಯ ಪ್ರಾಧಿಕಾರಗಳ ( ಪಕ್ಷಾಂತರ ನಿಷೇಧ ) ಅಧಿನಿಯಮ 2012ರ 3(1)ದಂತೆ ಕ್ರಮ ಕೈಗೊಳ್ಳಬೇಕು. ಸದ್ಯ ನಗರಸಭೆ ಉಪಾಧ್ಯೆಯಾಗಿರುವ ಅಶ್ವನಿ ಗದಗಿನಮಠ, ಬಸಮ್ಮ ದಿವಟರ್​, ಅನ್ನಪೂರ್ಣಮ್ಮ ಬಳಗೇರಿ ವಿಪ್​ ಉಲ್ಲಂಘಿಸಿದ್ದಾರೆ. ಅವರ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಪ್ರಮುಖರಾದ ರಾವೇಂದ್ರ ಪಾನಂಟಿ, ರಾಜು ಬಾಕಳೆ, ರಮೇಶ ನಾಡಿಗೇರ, ಸುನಿಲ್​ ಹೆಸರೂರು, ರಮೇಶ ಕವಲೂರು, ಗಣೇಶ ಹೊರತಟ್ನಾಳ, ಮಹಾಲಕ್ಷಿ$್ಮ ಕಂದಾರಿ, ಮಹೇಶ ಅಂಗಡಿ, ಅಮಿತ್​ ಕಂಪ್ಲಿಕರ್​, ವಿ.ಎಂ.ಭೂಸನೂರ ಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net