

ಕೊಪ್ಪಳ: ಶಾಲಾಪೂರ್ವ ಶಿಕ್ಷಣದಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಹೇಳಿದರು.
ನಗರದ ಗೌರಿ ಅಂಗಳದ ಸರ್ಕಾರಿ ಶಾಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ಶಾಲಾ ಪೂರ್ವ ಶಿಕ್ಷಣದಿಂದ ಮಕ್ಕಳ ಕಲಿಕೆಗೆ ಸಹಾಯವಾಗಲಿದೆ. ಪ್ರತಿ ಅಂಗನವಾಡಿ ಕೇಂದ್ರದಲ್ಲಿ ತರಬೇತಿ ನೀಡಬೇಕಿದೆ. ಇದರಿಂದ ಮಕ್ಕಳ ಭಾಷೆ, ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯಲ್ಲಿ ಮಾಹಿತಿ ತಿಳಿದುಕೊಳ್ಳಿ. ಎಲ್ಲ ಸಲಹೆಗಳನ್ನು ತಪ್ಪದೇ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಶಿವಶರಣಪ್ಪ ಗದ್ದಿ, ಶಿಕ್ಷಣ ಇಲಾಖೆ ಜಿಲ್ಲಾ ತರಬೇತಿ ಕೇಂದ್ರ ಉಪನ್ಯಾಸಕ ಕೃಷ್ಣ, ಟಾಟಾ ಕಲಿಕಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಅಶೋಕ್, ಹಿರಿಯ ಮೇಲ್ವಿಚಾರಕಿ ಜಯಶ್ರೀ ಕೂಲಿ, ಮೇಲ್ವಿಚಾರಕಿಯರಾದ ಭುವನೇಶ್ವರಿ, ಕಮಲಾಕ್ಷಿ ಇತರರಿದ್ದರು.