ಬಾಕಿ ಶಿಷ್ಯ ವೇತನ ಬಿಡುಗಡೆಗೊಳಿಸಿ

koppal building labor protest scholarship amount
Published on

ಕೊಪ್ಪಳ: ಕಟ್ಟಡ ಮತ್ತು ಇತರ ನಿಮಾಣ ಕಾರ್ಮಿಕರ ಮಕ್ಕಳಿಗೆ ಬಾಕಿ ಉಳಿಸಿಕೊಂಡಿರುವ ಶಿಷ್ಯವೇತನ ಬಿಡುಗಡೆಗೆ ಆಗ್ರಹಿಸಿ ಕಾರ್ಮಿಕರು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

2020-2023ವರೆಗೆ ಮೂರು ವರ್ಷದಿಂದ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ಅರ್ಜಿ ಸಲ್ಲಿಸಿದ್ದರೂ ಈವರೆಗೂ ಬಿಡುಗಡೆ ಮಾಡಿಲ್ಲ. ಹೆರಿಗೆ, ಚಿಕಿತ್ಸಾ ವೆಚ್ಚ ಸೇರಿ ಇತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಹಲವು ತಿಂಗಳಾದರೂ ಮರು ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಕೇಳಿದರೂ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಮಂಡಳಿಯಲ್ಲಿ ಸಾಕಷ್ಟು ದುಡ್ಡಿದ್ದರೂ ಬಿಡುಗಡೆಗೆ ಮೀನಾಮೇಷ ಎಣಿಸಲಾಗುತ್ತಿದೆ. ವಸತಿ ರಹಿತರಿಗೆ ನಿವೇಶನ ನೀಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ಮಾಡಿದರೂ ಸರ್ಕಾರ ಕಿವಿಗೊಡುತ್ತಿಲ್ಲವೆಂದು ಆರೋಪಿಸಿದರು.

ತಕ್ಷಣ ಮುರು ವರ್ಷದ ಬಾಕಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು. ಎಲ್ಲ ಕಾರ್ಮಿಕರಿಗೆ ನಿವೇಶನ ಸಹಿತ ವಸತಿ ಸೌಲಭ್ಯ ಕಲ್ಪಿಸಿ. ನೈಜ ಕಾರ್ಮಿಕರ ನೋಂದಣಿ ಮಾಡಿ. ಅನರ್ಹ ಕಾರ್ಡ್​ ರದ್ದುಗೊಳಿಸಿ. ವಿವಿಧ ಸೌಲಭ್ಯಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ತಕ್ಷಣವೇ ವಿಲೇವಾರಿಗೊಳಿಸಿ. ಟೆಂಡರ್​ ಆಧಾರಿತ ಎಲ್ಲ ಖರೀದಿ ವ್ಯವಹಾರ ನಿಲ್ಲಿಸಿ. ಪಿಂಚಣಿದಾರರಿಗೆ ಬಾಕಿ ಪಿಂಚಣಿ ಬಿಡುಗಡೆಗೊಳಿಸಿ. ಹೊಸ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆ ನಿವಾರಿಸುವಂತೆ ಆಗ್ರಹಿಸಿದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ೆಡರೇಷನ್​ ಜಿಲ್ಲಾಧ್ಯಕ್ಷ ಖಾಸಿಂ ಸರ್ದಾರ, ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್​, ಜಿಲ್ಲಾ ಕಾರ್ಯದರ್ಶಿ ರಂಗಪ್ಪ ದೊರೆ, ಜಿ.ನಾಗರಾಜ, ಶಿವನಗೌಡ, ದೊಡ್ಡನಗೌಡ, ಮಂಜುನಾಥ ಡಗ್ಗಿ, ಇಸ್ಮಾಯಿಲ್​ ಇಟಗಿ, ಶಶಿಕಲಾ, ಮಂಜಪ್ಪ, ಕಾಳಮ್ಮ, ದುರುಗಮ್ಮ, ಸಾವಿತ್ರಿ, ಶಿವಾನಂದಪ್ಪ, ಮಹೆಬೂಬ ತಂಬ್ರಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net