

ಕೊಪ್ಪಳ: ಇಂದಿರಾ ಕ್ಯಾಂಟಿನ್ಗೆ ಜಾಗ ನಿಗದಿ, ಸರ್ಕಾರಿ ಕಟ್ಟಡ ತೆರವು ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಭಾಗ್ಯನಗರ ಪಪಂ ಕಚೇರಿ ಮುಂದೆ ಪಪಂ ಬಿಜೆಪಿ ಸದಸ್ಯರು ಹಾಗೂ ಸಾರ್ವಜನಿಕರು ಶುಕ್ರವಾರ ಧರಣಿ ನಡೆಸಿದರು.
ಪಟ್ಟಣದ ಸರ್ಕಾರಿ ಶಾಲೆ ಆವರಣದಲ್ಲಿ ಕ್ಯಾಂಟೀನ್ ನಿರ್ಮಿಲಾಗುತ್ತಿದೆ. ಇಲ್ಲಿ ಮಾರುತೇಶ್ವರ ರಥೋತ್ಸವ ಜರುಗುತ್ತದೆ. ಶಾಲಾ ಮಕ್ಕಳಿಗೆ ತೊಂದರೆ ಆಗಲಿದೆ. ಕ್ಯಾಂಟೀನ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಜಾಗ ಬದಲಿಸಿ. ಪಪಂ ಮುಂಭಾಗದ ಸರ್ಕಾರಿ ಕಚೇರಿ ಏಕಾಏಕಿ ಒಡೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ್ಗಳಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಪಟ್ಟಿ ರಚಿಸಿ. ಆದ್ಯತೆ ಅನುಸಾರ ಪರಿಹಾರ ಕ್ರಮ ಕೈಗೊಳ್ಳಬೇಕು. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಕಾಮಗಾರಿಗಳಿಗೆ ಅನುಮೋದನೆ ನೀಡಲಿ. ತುರ್ತು ಸಭೆ ನಡೆಸಿ, ನಮಗೆ ಮಾಹಿತಿ ನೀಡದೇ ಕೆಲ ರ್ನಿಣಯ ಕೈಗೊಂಡಿದ್ದಾರೆ. ಮುಖ್ಯಾಧಿಕಾರಿ ಒತ್ತಡಕ್ಕೆ ಒಳಗಾಗಿ ನಿರ್ಧಾರ ಕೈಗೊಂಡಿದ್ದು, ಬದಲಾವಣೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು.
ಪಪಂ ಸದಸ್ಯರಾದ ಪರಶುರಾಮ ನಾಯಕ್, ವಾಸುದೇವ ಮೇಘರಾಜ್, ಜಗದೀಶ ಮಾಲಗಿತ್ತಿ, ಮಂಜುಳಾ ಶ್ಯಾವಿ, ಮಂಜವ್ವ ಮ್ಯಾಗಳಮನಿ, ಲಲಿತಾ ಡಂಬಳ, ಗೌರಮ್ಮ ಉಂಕಿ, ಜಯಮಾಲಾ ಶೇಡ್ಮಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣವರ, ಪ್ರಮುಖರಾದ ರಾಘವೇಂದ್ರ ಪಾನಘಂಟಿ, ಮಹಾಂತೇಶ ಮೈನಳ್ಳಿ, ಪ್ರಾಣೇಶ ಮಾದಿನೂರು, ರುಕ್ಮಣ್ಣ ಶ್ಯಾವಿ, ಸುರೇಶ ಡೊಣ್ಣಿ, ಶರಣಪ್ಪ ನಾಯಕ್, ಪೆದ್ದ ಸುಬ್ಬಯ್ಯ, ಸುರೇಶ ದರಗದಕಟ್ಟಿ, ವಜ್ರೇಶ ಮ್ಯಾಳಿ, ಕೊಟ್ರೇಶ ಕವಲೂರು, ನೀಲಕಂಠಪ್ಪ ಮೈಲಿ, ಗಿರೀಶ ಪಾನಘಂಟಿ ಇತರರಿದ್ದರು.