ಅಭ್ಯಾಸದತ್ತ ಹೆಚ್ಚು ಗಮನವಿರಲಿ

koppal bhagyanagara pu college
ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಫಿದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಿಡಿಸಿ ಉಪಾಧ್ಯಕ್ಷ ಗಂಗಾಧರ ಕಬ್ಬೇರ ಉದ್ಘಾಟಿಸಿದರು. ಸದಸ್ಯರಾದ ಯಮನಪ್ಪ ತಂಬ್ರಳ್ಳಿ, ಸುರೇಶ್​ ಯಲ್ಲಪ್ಪ ಕವಲೂರ, ಸವಿತಾ ಗೋರಂಟ್ಲಿ, ಯಂಕಪ್ಪ ಬಾರಕೇರ ಇದ್ದರು.
Published on

ಕೊಪ್ಪಳ : ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಓದಿಗೆ ಹೆಚ್ಚಿನ ಮಹತ್ವ ನೀಡಿ ಎಂದು ಭಾಗ್ಯನಗರ ಪಿಯು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಗಂಗಾಧರ ಕಬ್ಬೇರ ಹೇಳಿದರು.

ತಾಲೂಕಿನ ಭಾಗ್ಯನಗರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಓದುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಉತ್ತಮ ಭವಿಫ್ಯಿ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಉಪನ್ಯಾಸಕ ದೇವೇಂದ್ರ ಕುಮಾರ ದೊಡ್ಮನಿ ಮಾತನಾಡಿ, ಮಕ್ಕಳು ತರಗತಿಯಲ್ಲಿ ಚಟುವಟಿಕೆಯಿಂದ ಪಾಲ್ಗೊಳ್ಳಿ. ವಿಫಿಯ ಮನನ ಮಾಡಿಕೊಳ್ಳಿ. ಇದರಿಂದ ಪರೀಕ್ಷೆ ಎದುರಿಸಲು ಸುಲಭವಾಗಲಿದೆ ಎಂದು ಸಲಹೆ ನೀಡಿದರು.

ವಾಣಿಜ್ಯೋದ್ಯಮಿ ಶ್ರೀನಿವಾಸ್​ ಗುಪ್ತಾ ಪ್ರತಿಭಾವಂತ ವಿದ್ಯಾರ್ಥಿನಿ ದಾಕ್ಷಾಯಣಿ ಹೊಟ್ಟಿಗೆ ಲ್ಯಾಪ್​ಟಾಪ್​ ನೀಡಿದರು. ಗಂಗಾಧರ ಕಬ್ಬೇರ್​ ನಗದು ಬಹುಮಾನ ನೀಡಿದರು. ಅರ್ಥಶಾಸ್ತ್ರ ವಿಫಿಯದಲ್ಲಿ ಶೇ.99 ರಫಿ್ಟು ಫಲಿತಾಂಶ ದಾಖಲಿಸಿದ ಉಪನ್ಯಾಸಕ ಹನುಮರೆಡ್ಡಿ ತಿಮ್ಮಾರೆಡ್ಡಿಗೆ ಸನ್ಮಾನಿಸಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಯಮನಪ್ಪ ತಂಬ್ರಳ್ಳಿ, ಸುರೇಶ್​ ಯಲ್ಲಪ್ಪ ಕವಲೂರ, ಸವಿತಾ ಗೋರಂಟ್ಲಿ, ಯಂಕಪ್ಪ ಬಾರಕೇರ, ಕಾಲೇಜಿನ ಉಪನ್ಯಾಸಕರಾದ ನಾಗಲಿಂಗಪ್ಪ ಕಂಡ್ರಿ, ಬಸವರಾಜ ಹುಬ್ಬಳ್ಳಿ, ಪಾಲಕ, ಪೋಫಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net