

ಕೊಪ್ಪಳ: ಭಗತ್ ಸಿಂಗ್ ದೇಶ ಕಂಡ ಶ್ರೇಷ್ಠ ಸ್ವಾತಂತ್ರ$್ಯ ಹೋರಾಟಗಾರರಲ್ಲಿ ಒಬ್ಬರು. ಸಮಾಜವಾದಿ ಭಾರತ ನಿರ್ಮಾಣದ ಕನಸು ಕಂಡಿದ್ದರು. ಯುವಕರು ಅವರ ಕನಸು ನನಸಾಗಿಸಬೇಕಿದೆ ಎಂದು ಎಐಡಿವೈಒ ಸಂಟಕ ಗಂಗರಾಜ ಅಳ್ಳಳ್ಳಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಗತ್ಸಿಂಗ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ$್ಯಕ್ಕಾಗಿ ತಮ್ಮ 23ನೇ ವಯಸ್ಸಿಗೆ ಗಲ್ಲಿಗೇರಿದರು. ಕ್ರಾಂತಿಕಾರಿ ಸಂಟನೆ ಮೂಲಕ ದೇಶದಲ್ಲಿ ಸಮಾಜವಾದಿ ಕ್ರಾಂತಿ ಮಾಡುವ ಪರಿಕಲ್ಪನೆ ಹೊಂದಿದ್ದರು. ಯಾವುದೇ ಅಸಮಾನತೆ, ಶೋಷಣೆ, ಹಸಿವು ಮುಕ್ತ ಭಾರತದ ಕನಸು ಹೊತ್ತಿದ್ದರು. ಆದರೆ, ಇಂದು ದೇಶದಲ್ಲಿ ಮಹಿಳಾ ಶೋಷಣೆ ಮಿತಿ ಮೀರಿದೆ. ರೈತರ ಆತ್ಮಹತ್ಯೆ, ಬಡತನ, ನಿರುದ್ಯೋಗ ಹೆಚ್ಚುತ್ತಿದೆ. ಇದೆಲ್ಲವನ್ನು ಮುಕ್ತಗೊಳಿಸುವ ಹೊಣೆ ಯುವಜನರ ಮೇಲಿದೆ ಎಂದರು.
ಸಂಟಕರಾದ ಮಂಜುಳಾ ಮಜ್ಜಿಗೆ, ದೇವರಾಜ ಹೊಸಮನಿ ಮಾತನಾಡಿದರು. ವೆಂಕಟೇಶ್, ಹುಸೇನ್ಬಿ ಇತರರಿದ್ದರು.