

ಕೊಪ್ಪಳ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬ ಕಾನೂನಾತ್ಮಕವಾಗಿ ಯಾವುದೇ ತಪ್ಪು ಮಾಡಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ತಾಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ಒತ್ತಡದಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಅವರ ನಡೆ ತಪು$್ಪ ಎಂದು ಅವರಿಗೆ ಗೊತ್ತಿದೆ. ಒಂದೊಮ್ಮೆ ಸಿಎಂ ಪತ್ನಿ ಬರೆದಿದ್ದಾರೆ ಎಂಬ ಪತ್ರ ತಿರುಚಿದ್ದರೆ ತನಿಖೆ ನಡೆಸಲಿ. ನಾನು ಮುಡಾ ಕೇಸ್ ಬಗ್ಗೆ ಅಧ್ಯಯನ ಮಾಡಿರುವೆ. ಎಳ್ಳು ಕಾಳಷ್ಟೂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. 1997ರಲ್ಲಿ ಇದು ಒಂದೇ ಭೂಮಿ ಡಿನೋಟಿೈ ಆಗಿಲ್ಲ. ಸಾವಿರಾರು ಆಗಿವೆ ಎಂದರು.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿಸಿದ್ದನ್ನು ಖಂಡಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ತಮ್ಮ ಭೂಮಿಗೆ ಪ್ರತಿಯಾಗಿ ಸಿಎಂ ಪತ್ನಿ ಸೈಟ್ ನೀಡುವಂತೆ ಮುಡಾಗೆ ಪತ್ರ ಬರೆದರೂ ತಪ್ಪಲ್ಲ. ಭೂಮಿಗೆ ಬದಲಾಗಿ ಬೇರೆ ಸೈಟ್ ಕೇಳಿದರೆ ಹೇಗೆ ತಪ್ಪಾಗುತ್ತದೆ ಎಂದು ಸರ್ಕಾರದ ನಡೆ ಸರಿ ಎಂದು ಸಮರ್ಥಿಸಿಕೊಂಡರು.