

ಕೊಪ್ಪಳ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯಕ್ಕಾಗಿ ಕಾನೂನು ಹೋರಾಟ ಮಾಡಲಾಗುವುದೆಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೋರಾಟಕ್ಕೂ ಪೂರ್ವದಲ್ಲಿ ನಮ್ಮ ಸಮುದಾಯ ವಕೀಲರ ಸಂಟನೆಯ ಮಹಾಪರಿಷತ್ ಸೆ.22ರಂದು ಬೆಳಗಾವಿಯಲ್ಲಿ ಹ ಮ್ಮಿಕೊಳ್ಳಲಾಗುವುದು. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಒಂದೂ ಸಭೆ ಮಾಡಲಿಲ್ಲ. ಅಧಿವೇಶನದಲ್ಲಿ ಚರ್ಚಿಸುವಂತೆ ನಮ್ಮ ಶಾಸಕರಿಗೆ ಆಗ್ರಹಿಸಲಾಗಿತ್ತು. ಆದರೆ, ವಾಲ್ಮೀಕಿ, ಮುಡಾ ಹಗರಣಗಳ ಚರ್ಚೆಯಲ್ಲಿ ನಮ್ಮ ವಿಷಯ ಚರ್ಚೆಗೆ ಅವಕಾಶ ದೊರೆಯಲಿಲ್ಲ. ನಮ್ಮ ಶಾಸಕದ ದನಿ ಅಡಗಿಸುವ ಯತ್ನ ನಡೆದಿದೆ. ಅವಕಾಶ ಸಿಗದಿದ್ದಾಗ ಸಭಾ ತ್ಯಾಗ ಮಾಡಬೇಕಿತ್ತು ಮಾಡಿಲಿಲ್ಲವೆಂದು ಬೇಸರಿಸಿದರು.
ಶಾಸಕ, ಸಚಿವರು ಕೇವಲ ಪಕ್ಷದ ಗುರುತಿನ ಮೇಲೆ ಗೆದ್ದಿಲ್ಲ. ಸಮುದಾಯದ ಜನರು ಬೆಂಬಲಿಸಿದ್ದಕ್ಕೆ ಅಧಿಕಾರಕ್ಕೆ ಬಂದಿದ್ದಾರೆ. ಮೀಸಲಾತಿ ಸಂಬಂಧ ಸಿಎಂ ಮೇಲೆ ಒತ್ತಡ ಹೇರಬೇಕು. ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೂ ಪೂರ್ವದಲ್ಲಿ ಸಭೆ ಕರೆಯುವ ಭರವಸೆ ನೀಡಿದ್ದರೂ ಈವರೆಗೂ ಕರೆದಿಲ್ಲ. ಅವರು ಕಾನೂನು, ಸಾಮಾಜಿಕ ನ್ಯಾಯ, ಅಂಬೇಡ್ಕರ್ ಹೆಸರು ಹೇಳುತ್ತಾರೆ. ಹಿಂದಿನ ಸರ್ಕಾರ ನೀಡಿದ್ದ 2ಡಿ ಸೌಲಭ್ಯ ಕಲ್ಪಿಸಿದ್ದರೂ ಸ್ವಲ್ಪವಾದರೂ ಅನುಕೂಲವಾಗುತ್ತಿತ್ತು. ಈಗಿನ ಸರ್ಕಾರ ಸ್ಪಂದಿಸುತ್ತಿಲ್ಲ. ನಾವೂ ಕಾನೂನು ಹೋರಾಟ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ ಎಂದರು.
ಮಾಜಿ ಸಂಸದ ಶಿವರಾಮಗೌಡ, ಸಮುದಾಯ ಪ್ರಮುಖರಾದ ಸಿ.ಎಚ್. ಪೊಲೀಸ್ ಪಾಟೀಲ, ರಾಜಶೇಖರ ನಿಂಗೋಜಿ, ಕರಿಯಪ್ಪ ಮೇಟಿ, ದೇವರಾಜ ಹಾಲಸಮುದ್ರ, ಮಹಾಂತೇಶ ಮಲ್ಲನಗೌಡರ ಇತರರಿದ್ದರು.