ಘೋಷಿತ ಪರಿಹಾರ ನೀಡಲು ಟೈಲರ್ಸ್ ಮತ್ತು ಕಾರ್ಮಿಕ ಸೇವಾಭಿವೃದ್ಧಿ ಸಂಘ ಒತ್ತಾಯ

140820 Koppal Tailors Association Appeal
ಪರಿಹಾರ ವಿತರಿಸುವಂತೆ ಒತ್ತಾಯಿಸಿ ಟೈಲರ್ಸ್ ಸಂಘದಿಂದ ಶುಕ್ರವಾರ ಕೊಪ್ಪಳದಲ್ಲಿ ಜಿಲ್ಲಾಧಿಕಾರಿ ಕಚೇರಿ ನೌಕರನಿಗೆ ಮನವಿ ಸಲ್ಲಿಸಲಾಯಿತು.
Published on

ಕೊಪ್ಪಳ: ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಲಾಕ್‌ಡೌನ್ ಪರಿಹಾರದಲ್ಲಿ ಟೈಲರ್‌ಗಳಿಗೂ ನೀಡುವುದಾಗಿ ಘೋಷಿಸಿದೆ. ಆದರೆ, ಈವರೆಗೂ ನಮಗೆ ಪರಿಹಾರ ಬಂದಿಲ್ಲ. ಕೂಡಲೇ ಸರ್ಕಾರ ವಿತರಿಸಬೇಕೆಂದು ಟೈಲರ್ಸ್ ಮತ್ತು ಕಾರ್ಮಿಕ ಸೇವಾಭಿವೃದ್ಧಿ ಸಂಘದಿಂದ ಶುಕ್ರವಾರ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಲಾಕ್‌ಡೌನ್‌ನಿಂದಾಗಿ ಎಲ್ಲ ವರ್ಗದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 5-6 ತಿಂಗಳಿನಿಂದ ಸರಿಯಾಗಿ ಕೆಲಸವಿಲ್ಲದೆ ಹೊಟ್ಟೆ ಹೊರೆಯುವುದು ಕಷ್ಟವಾಗಿದೆ. ಏಪ್ರಿಲ್‌ನಲ್ಲಿ ಕಾರ್ಮಿಕ ಸಚಿವರು ಜಿಲ್ಲಾ ಪ್ರವಾಸ ಮಾಡಿದಾಗ ಪರಿಹಾರ ನೀಡುವಂತೆ ಮನವಿ ಮಾಡಿದ್ದೆವು. ಬಳಿಕ ಸಿಎಂ 1600 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿಸಿ ಶ್ರಮಿಕ ವರ್ಗದವರಿಗೆ ವಿತರಿಸುವುದಾಗಿ ತಿಳಿಸಿದ್ದರು. ಅದರಲ್ಲಿ ಅಸಂಘಟಿತ ಕಾರ್ಮಿಕರಾದ ಟೈಲರ್ಸ್‌ಗಳಿಗೂ ನೀಡುವುದಾಗಿ ಹೇಳಲಾಗಿತ್ತು ಎಂದರು.

ಆದರೆ, ಈವರೆಗೆ ಜಿಲ್ಲಾಧಿಕಾರಿಗಳಿಗೆ ನಮಗೆ ಪರಿಹಾರ ನೀಡಲು ಹಾಗೂ ನಮ್ಮ ದಾಖಲೆಗಳನ್ನು ಪಡೆವಂತೆ ಸರ್ಕಾರ ಸೂಚಿಸಿಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ. ಕರೊನಾ ಹಾವಳಿ ಮುಂದುವರೆದಿದ್ದು, ಸದ್ಯಕ್ಕೆ ನಿಯಂತ್ರಣವಾಗುವ ಲಕ್ಷಣಗಳಿಲ್ಲ. ಇಂಥ ಸಮಯದಲ್ಲಿ ಸರ್ಕಾರ ಪರಿಹಾರ ನೀಡಿದಲ್ಲಿ ಅನುಕೂಲವಾಗಲಿದೆ. ಕೂಡಲೇ ಜಿಲ್ಲಾಧಿಕಾರಿಗಳು ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕು. ಸಂಕಷ್ಟದಲ್ಲಿರುವ ನಮ್ಮಂಥ ಟೈಲರ್‌ಗಳಿಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರ ನಮಗೆ ಪರಿಹಾರ ನೀಡುವ ಭರವಸೆಯಿದ್ದು, ಜಿಲ್ಲಾ ಜನಪ್ರತಿನಿಧಿಗಳು ಒತ್ತಡ ಹೇರಬೇಕೆದು ಒತ್ತಾಯಿಸಿದರು ಸಂಘದ ಪದಾಧಿಕಾರಿಗಳಾದ ರಮೇಶ್ ಅವಾಜಿ, ಮಹೇಶ ಮಕ್ಕಳಿ, ಸುನೀಲ್ ಕಾಳೇಕರ್, ಶರಣಮ್ಮ ಕಲ್ಮಂಗಿ, ಶರಣಪ್ಪ ಕಂಚಿ, ಮೌನೇಶ ಬಡಿಗೇರ, ವಿರೂಪಾಕ್ಷಪ್ಪ ಕಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net