ಅಂಜನಾದ್ರಿ ಅಭಿವೃದ್ಧಿಗೆ 50 ಕೋಟಿ ರೂ.,

Anjanadri Hill Development Meeting
ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಯಿತು. ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ.ಪಾಟೀಲ್, ಸಿ.ಪಿ.ಯೋಗಿಶ್ವರ ಇದ್ದರು.
Published on

ಕೊಪ್ಪಳ: ಅಂಜನಾದ್ರಿ ಪರ್ವತದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಮೊದಲ ಹಂತವಾಗಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು 50 ಕೋಟಿ ರೂ. ಮೊತ್ತ ಮೀಸಲಿಡಲಾಗಿದೆ.

ಈ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಬರುವ ಸಂಪುಟ ಸಭೆಯಲ್ಲಿ ವಿಷಯ ಅನುಮೋದಿಸಲು ತೀರ್ಮಾನಿಸಲಾಗಿದೆ.

ಆಂಜನೇಯ ಜನಿಸಿದ ಸ್ಥಳವೆಂದು ಐತಿಹ್ಯ ಹೊಂದಿರುವ ಅಂಜನಾದ್ರಿ ದೇಶದ ಗಮನ ಸೆಳೆದಿದೆ. ಹೀಗಾಗಿ ದೇವಾಲಯದ ಸಮಗ್ರ ಅಭಿವೃದ್ಧಿ ಮಾಡುವಂತೆ ಭಕ್ತರಿಂದ ಒತ್ತಾಯ ಕೇಳಿ ಬಂದಿತ್ತು. ಕಳೆದ ಬಜೆಟ್‌ನಲ್ಲಿ 20 ಕೋಟಿ ರೂ. ಅನುದಾನ ನೀಡಿದ್ದ ಸರ್ಕಾರ, ಸದ್ಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರಚಿಸಿದೆ. ಮೊದಲ ಹಂತವಾಗಿ 50 ಕೋಟಿ ರೂ.ಯಲ್ಲಿ ಕುಡಿವ ನೀರು, ಶೌಚಗೃಹ, ಸ್ನಾನ ಗೃಹ, ರಸ್ತೆ ನಿರ್ಮಾಣ, ವೈಜ್ಞಾನಿಕ ಕಸ ವಿಲೇವಾರಿ, ಬೆಟ್ಟದ ಕೆಳಭಾಗದಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ಪಾರ್ಕಿಂಗ್, ಹುಲಿಗಿ-ಗಂಗಾವತಿ ರಾಜ್ಯ ಹೆದ್ದಾರಿ ವಿಸ್ತರಣೆ, ಬೀದಿ ದೀಪ ಅಳವಡಿಕೆ, ಸೇವಾ ಹಾಗೂ ಟಿಕೆಟ್ ಕೌಂಟರ್ ನಿರ್ಮಾಣ, ಪ್ರವಾಸಿಗರ ತುರ್ತು ಚಿಕಿತ್ಸೆಗೆ ಆಸ್ಪತ್ರೆ, ಮೊಬೈಲ್ ಟವರ್ ಅಳವಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net