ವಿದ್ಯಾರ್ಥಿಗಳಿಗೆ ಸಂಭ್ರಮದ ಸ್ವಾಗತ

06092021 Koppal School Start
Published on

ಕೊಪ್ಪಳ: ಜಿಲ್ಲೆಯಲ್ಲಿ ಸೋಮವಾರ 6ರಿಂದ 8ನೇ ತರಗತಿ ಭೌತಿಕವಾಗಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಹರ್ಷದಿಂದ ಶಾಲೆಗಳಿಗೆ ಆಗಮಿಸಿದರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 6ನೇ ತರಗತಿಗೆ 29715 ವಿದ್ಯಾರ್ಥಿಗಳು, 7ನೇ ತರಗತಿಗೆ 29637 ಹಾಗೂ 8ನೇ ತರಗತಿಗೆ 27502 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೂ ನೀಡಿ ಸ್ವಾಗತ ಕೋರಿದರು.

ಕೆಲವೆಡೆ ಶಾಲಾ ಆವರಣದಲ್ಲಿ ರಂಗೋಲಿ ಬಿಡಿಸಿದ್ದು ಕಂಡುಬಂತು. ಮೊದಲ ದಿನ ಪಾಲಕರು ಲಸಿಕೆ ಪಡೆದ ಬಗ್ಗೆ ಮಾಹಿತಿ ತಿಳಿಯುವುದರ ಜತೆಗೆ ಕೋವಿಡ್ ನಿಯಮಗಳ ಪಾಲನೆ, ಊಟ ಹಂಚಿಕೊಂಡು ತಿನ್ನಬಾರದು ಎಂಬುದು ಸೇರಿದಂತೆ ಇತರ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net