260 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡ ನಗರಸಭೆ ಅಧಿಕಾರಿಗಳು

Koppal 260 KG Plastic Seize
ಕೊಪ್ಪಳದಲ್ಲಿ ಶುಕ್ರವಾರ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಕ್ ವಶಪಡಿಸಿಕೊಂಡರು. ನಗರಸಭೆ ಪೌರಾಯುಕ್ತ ಮಂಜುನಾಥ ತಳವಾರ ಇತರ ಸಿಬ್ಬಂದಿ ಇದ್ದರು.
Published on

ಕೊಪ್ಪಳ: ನಗರಸಭೆ ಅಧಿಕಾರಿಗಳು ಶುಕ್ರವಾರ ಬೆಳಂಬೆಳಗ್ಗೆ ನಗರದಲ್ಲಿ ಪೂರೈಕೆಯಾಗುತ್ತಿದ್ದ 260 ಕೆ.ಜಿ. ಪ್ಲಾಸ್ಟಿಕ್‌ನ್ನು ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ನಗರಸಭೆ ಪೌರಾಯುಕ್ತ ಮಂಜುನಾಥ ತಳವಾರ ನೇತೃತದ ಅಧಿಕಾರಿಗಳ ತಂಡ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದರು. ಈ ವೇಳೆ ಗಾಡಿಯೊಂದರಲ್ಲಿ 9 ಚೀಲಗಳಲ್ಲಿ 260 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್‌ನ್ನು ಸಾಗಿಸಲಾಗುತ್ತಿತ್ತು. ಚೀಲಗಳ ಮೇಲೆ ಎಸ್‌ಎಸ್‌ಎಸ್ ಎಂದು ಬರೆದಿದ್ದು, ಯಾರ ಅಂಗಡಿಗೆ ಪೂರೈಸಲಾಗುತ್ತಿತ್ತೆಂದು ತಿಳಿದು ಬಂದಿಲ್ಲ. ಗಾಡಿ ಬಳಿ ಯಾರೋಬ್ಬರು ಸುಳಿಯದ ಕಾರಣ ವಾಹನ ಹಾಗೂ ಪ್ಲಾಸ್ಟಿಕ್‌ನ್ನು ವಶಕ್ಕೆ ಪಡೆಯಲಾಗಿದೆ. ಪರಿಸರ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net