ಕಾರ್ಮಿಕರಿಗೆ ನಿವೃತ್ತಿ ವೇತನ ನೀಡಿ

SAVE_20241018_214046
Published on

ಕೊಪ್ಪಳ: ಎಲ್ಲ ವಿಧದ ಕಾರ್ಮಿಕರಿಗೆ ನಿವೃತ್ತಿ ವೇತನ ಸೇರಿ ಇತರ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ವೃತ್ತಪರ ವ್ಯವಸಾಯ ಯೂನಿಯನ್​ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್​ ವಿಠ್ಠಲ ಚೌಗಲಾಗೆ ಮನವಿ ಸಲ್ಲಿಸಿದರು.

ಕೃಷಿ ಕೂಲಿ ಕಾರ್ಮಿಕರು ಸೇರಿ ಎಲ್ಲ ವಿಧದ ಕಾರ್ಮಿಕರು ಕನಿಷ್ಠ ಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ. ದಲಿತರಿಗೆ ಭೂಮಿ ಸಿಗುತ್ತಿಲ್ಲ. ಕೃಷಿ ಸಂಬಂಧಿ ಕಾರ್ಮಿಕರನ್ನು ಕುಶಲ ಕಾರ್ಮಿಕರೆಂದು ಗುರುತಿಸುತ್ತಿಲ್ಲ. ನಿರಾಶ್ರಿತರಿಗೆ ವಸತಿ ಸೌಲಭ್ಯ ಸಿಗುತ್ತಿಲ್ಲ. ಆರೋಗ್ಯ ವಿಮೆ, ಇಎಸ್​ಐ, ಪಿಎ್​ ಸೌಲಭ್ಯಗಳು ದೊರೆಯುತ್ತಿಲ್ಲ. ಅಕ್ರಮ ಸಕ್ರಮದಡಿ ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿಯಾಗುತಿಲ್ಲವೆಂದು ಆರೋಪಿಸಿದರು.

60 ವರ್ಷ ಪೂರೈಸಿದ ಎಲ್ಲರಿಗೂ ನಿವೃತ್ತಿ, ವೃದ್ಧಾಪ್ಯ ವೇತನ ನೀಡಿ. ವಸತಿ ರಹಿತರಿಗೆ ವಸತಿ ನೀಡಿ. ಕೃಷಿ ಕಾರ್ಮಿಕರ ಸಹಜ ಸಾವು, ಆಕಸ್ಮಿಕ ಸಾವಿಗೆ 5 ಲಕ್ಷ ರೂ. ಪರಿಹಾರ ನೀಡಿ. ಭೂ ರಹಿತರಿಗೆ ಭೂ ಒಡೆತನ ಯೋಜನೆಯಡಿ 5 ಎಕರೆ ಭೂಮಿ ನೀಡಿ. ಅರಣ್ಯ ಭುಮಿ ಹಕ್ಕು ಕಾಯ್ದೆ ಜಾರಿ ಮಾಡಿ. ಪಾಳು ಭೂಮಿ ಪಜಾ, ಪಪಂ ವರ್ಗದ ಬಡವರಿಗೆ ನೀಡಿ. ನರೇಗಾದಡಿ ವರ್ಷಕ್ಕೆ 200 ದಿನಗಳ ಕೂಲಿ ಕೆಲಸ ನೀಡಿ. ಕೃಷಿ ಮತ್ತು ಕೃಷಿ ಸಂಬಂಧಿ ಕಾರ್ಮಿಕರನ್ನು ಕುಶಲ ಕಾಮಿಕರೆಂದು ಪರಿಗಣಿಸುವಂತೆ ಒತ್ತಾಯಿಸಿದರು. ಕೆವಿವಿ ಯೂನಿಯನ್​ ಜಿಲ್ಲಾಧ್ಯಕ್ಷ ಯಲ್ಲಪ್ಪ ಮ್ಯಾಗಳಕೇರಿ, ಹನುಮಂತಿ ತಿಪ್ಪನಾಳ, ಮಾರುತಿ ದೊಡ್ಮನಿ, ಶಿವಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net