ಕೂಟತ್ತಜೆ ದೈವಸ್ಥಾನ ಆಮಂತ್ರಣ ಬಿಡುಗಡೆ

2
Published on

ಮಂಜೇಶ್ವರ: ಕರ್ನಾಟಕದ ಗಡಿಭಾಗದಲ್ಲಿರುವ ‘ಮೂವರ್ ದೈಯೊಂಗುಳು’ ಎಂದು ಭಕ್ತಿಯಿಂದ ಕರೆಯಲ್ಪಡುವ ಕೂಟತ್ತಜೆ ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ, ತೋಡಕುಕ್ಕಿನಾರ್ ಪ್ರಧಾನ ದೈವಗಳಾಗಿ ಪರಿವಾರ ದೈವಗಳೊಂದಿಗೆ ಪುರಾತನ ಐತಿಹ್ಯ ಹೊಂದಿದೆ. ಕೂಟತ್ತಜೆ ಕ್ಷೇತ್ರದ ಸ್ಥಾನ, ಮಾಡ, ಭಂಡಾರ ಮನೆ ಇದೀಗ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ.

ಕ್ಷೇತ್ರ ವ್ಯಾಪ್ತಿಯ ‘ಮೂಜಿ ಊರು ಐನ್ ಗ್ರಾಮ’ ಭಕ್ತಿ ಸಂಭ್ರಮ ಮಾರ್ಚ್ 30ರಿಂದ ಏಪ್ರಿಲ್ 6ರತನಕ ವರ್ಕಾಡಿ ಹೊಸಮನೆ ಬ್ರಹ್ಮಶ್ರೀ ರಾಜೇಶ ತಾಳಿತ್ತಾಯ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಶೈಲೇಂದ್ರ ಭರತ ನಾಯ್ಕ ನಚ್ಚಗುತ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ, ಪರಿವಾರ ದೈವಗಳ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.

30ರಂದು ಮಧ್ಯಾಹ್ನ 3.30ಕ್ಕೆ ಹಸಿರು ಹೊರೆಕಾಣಿಕೆ ಮುಡಿಪು ಮುಡಿಪಿನ್ನಾರ್ ದೈವಸ್ಥಾನದಿಂದ ಹೂಹಾಕುವಕಲ್ಲು, ನಂದರಪದವು ಪ್ರದೇಶಗಳಲ್ಲಿ ಹಾದು ಕೂಟತ್ತಜೆ ಕ್ಷೇತ್ರ ತಲುಪಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿ, ನಾಡಿನ ಪ್ರಸಿದ್ಧ ವ್ಯಕ್ತಿ, ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಕ್ಷೇತ್ರದ ಎಲ್ಲ ಕಾರ್ಯಕ್ರಮಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಸ್ವಚ್ಛತೆಯಿಂದ ನೆರವೇರಿಸಲು ಯೋಚಿಸಲಾಗಿದೆ ಎಂದು ಹೇಳಿದರು.

ದೈವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಪೊಯ್ಯತ್ತಬೈಲ್, ಸತೀಶ್ ಜೋಗಿ ಕೂಟತ್ತಜೆ, ಕಾಮಗಾರಿ ಅಭಿಯಂತ ಸುರೇಶ್ ಕೊಂಡೆ ಕೂವೆತ್ತಬೈಲ್, ಪ್ರಧಾನ ಸಂಚಾಲಕ ನಂದರಾಜ್ ಶೆಟ್ಟಿ ಪಿಜಿನಬೈಲ್, ಕಾರ್ಯದರ್ಶಿ ಆನಂದ ಜೋಗಿ ಕೂಟತ್ತಜೆ, ಸಹಕೋಶಾಧಿಕಾರಿ ಉಗ್ಗಪ್ಪ ಮಾಣೈ ಬೀರೂರು, ಹರೀಶ್ ಜೋಗಿ ಉಪಸ್ಥಿತರಿದ್ದರು.

ಪ್ರಶ್ನಾ ಚಿಂತನೆಯಲ್ಲಿ ಜೀರ್ಣೋದ್ಧಾರದ ಅನಿವಾರ್ಯತೆ ಕಂಡು ಬಂದಿದ್ದರಿಂದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಕೆಲಸ ಕಾರ್ಯ ಭಾಗಶಃ ನಡೆದಿದೆ. ದೊಡ್ಡ ಮೊತ್ತ ಅವಶ್ಯಕತೆ ಇದ್ದ ಕಾರಣ ಕೆಲಸ ಪ್ರಾರಂಭಿಸಿದ ಬಳಿಕ ಜನರು ಸಹಕಾರ ನೀಡಿದ್ದಾರೆ. ಸ್ಥಳೀಯರು ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಧಾಕೃಷ್ಣ ರೈ ಉಮಿಯ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net