

ಮಧೂರು: ಪರಿಶ್ರಮ ಹಾಗೂ ಬದ್ಧತೆಯಿಂದ ಯಾವ ಕಾರ್ಯವನ್ನೂ ಸಾಧಿಸಬಹುದು ಎಂದು ಕೂಟ ಮಹಾಜಗತ್ತು ಸಾಲಿಗ್ರಾಮ ಕಾಸರಗೋಡು ಅಂಗ ಸಂಸ್ಥೆ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ಅಭಿಪ್ರಾಯಪಟ್ಟರು.
ಪುಳ್ಕೂರು ಕೃಷ್ಣ ಹಂದೆ ನಿವಾಸದಲ್ಲಿ ಕೂಟ ಮಹಾಜಗತ್ತು ಕಾಸರಗೋಡು ಅಂಗ ಸಂಸ್ಥೆಯ ಸಂಪರ್ಕ ಸಭೆಯಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ಕಳೆದ ಸಾಲಿನ ಕನ್ನಡ ಬಿ.ಎ ಪದವಿ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ಶ್ರೀವಿದ್ಯಾ ಎಸ್.ನೀರಾಳ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿ ಮಾತನಾಡಿದರು.
ಶ್ರೀವಿದ್ಯಾ ಎಸ್.ಮಾತನಾಡಿದರು. ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಮಾಜಿ ಸದಸ್ಯ ನೀರಾಳ ಕೃಷ್ಣ ಹೊಳ್ಳ, ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ನಿವೃತ್ತ ಅಧ್ಯಾಪಕ ನರಸಿಂಹ ಮಯ್ಯ ಎಂ.ಮಧೂರು ಹಾಗೂ ಹಿರಿಯರಾದ ಕೃಷ್ಣ ಹೆಬ್ಬಾರ್ ಪುಳ್ಕೂರು ಉಪಸ್ಥಿತರಿದ್ದರು. ಪ್ರಭಾಕರ ಕಾರಂತ ಸ್ವಾಗತಿಸಿ, ನಿವೃತ್ತ ಅಧ್ಯಾಪಕ ಕೃಷ್ಣ ಕಾರಂತ ಬನ್ನೂರು ವಂದಿಸಿದರು.