ಕೂಸನೂರ ಗ್ರಾಮದೇವಿ ದೇವಸ್ಥಾನ ಲೋಕಾರ್ಪಣೆ ಫೆ.3ರಂದು

21 AKR 02 NEW PHOTO
Published on

ಅಕ್ಕಿಆಲೂರ: ಸಮೀಪದ ಕೂಸನೂರ ಗ್ರಾಮದಲ್ಲಿ ಜ.24ರಿಂದ ಫೆ. 7ವರೆಗೆ ನಡೆಯುವ ಪುರಾಣ ಪ್ರಸಿದ್ಧ ಗ್ರಾಮದೇವಿ ದೇವಸ್ಥಾನ ನೂತನ ಶಿಲಾಕಟ್ಟಡ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಜ.24ರಿಂದ ಫೆ. 3ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಗದುಗಿನ ಕಲ್ಲಿನಾಥ ಶಾಸ್ತ್ರಿಗಳಿಂದ ಶಿವಶರಣೆ ಗುಡ್ಡಾಪುರ ದಾನಮ್ಮ ದೇವಿ ಪ್ರವಚನ ಜರುಗಲಿದೆ. ಫೆ. 3ರಂದು ಪ್ರವಚನ ಮಂಗಲ, ನೂತನ ಶಿಲಾಕಟ್ಟಡ ಲೋಕಾರ್ಪಣೆ ಮತ್ತು ದೇವಸ್ಥಾನ ಪ್ರವೇಶ ಕಾರ್ಯಕ್ರಮ ಜರುಗಲಿದೆ. 4ರಂದು ಹೋಮ ಹವನಗಳು, ಸಂಜೆ 6 ಗಂಟೆಗೆ ಹಿಂದು ಸಮಾಜದ ಎಲ್ಲ ಸಮುದಾಯಗಳ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಜಾಗೃತಿ ಸಮಾರಂಭ ಆಯೋಜಿಸಲಾಗಿದೆ. 5ರಂದು ಬೆಳಗ್ಗೆ 9.30ಕ್ಕೆ ಸುದರ್ಶನ ಹೋಮ, ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 8 ಗಂಟೆಯಿಂದ ತೀರ್ಥಹಳ್ಳಿಯ ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 6ರಂದು ಬೆಳಗ್ಗೆ 9 ಗಂಟೆಗೆ ಸುಮಂಗಲೆಯರಿಂದ ಗಂಗಾಪೂಜೆ, ಪೂರ್ಣಕುಂಭ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ದೇವಸ್ಥಾನದಲ್ಲಿ ಹಣಹೋಮ, ಮಧ್ಯಾಹ್ನ 3 ಗಂಟೆಗೆ ಬೃಹತ್ ಬೈಕ್ ರ‌್ಯಾಲಿ, ಸಂಜೆ 5 ಗಂಟೆಗೆ ಹಾರಿಕಾ ಮಂಜುನಾಥ ಅವರಿಂದ ದಿಕ್ಸೂಚಿ ಭಾಷಣ ನೆರವೇರಲಿದೆ. 7ರಂದು ಬೆಳಗ್ಗೆ 5 ಗಂಟೆಯಿಂದ ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ರಾತ್ರಿ 9 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಣೇಶ ದೇವಸೂರ ಹೇಳಿದರು.

ತಿಪ್ಪಯ್ಯಸ್ವಾಮಿ ಆಶ್ರಮ ಜ್ಯೋತಿರ್ಲಿಂಗಾನಂದ ಶ್ರೀ, ಫಕೀರಯ್ಯ ಬೆನ್ನೂರಮಠ, ಡಾ. ಸುನೀಲ ಹಿರೇಮಠ, ಮಲ್ಲೇಶಣ್ಣ ಹಾಲಮ್ಮನವರ, ಶಂಕ್ರಪ್ಪ ಕಮ್ಮಾರ, ವೀರಪ್ಪ ಅಕ್ಕಿವಳ್ಳಿ, ಚನ್ನಬಸಪ್ಪ ಬಂಕೊಳ್ಳಿ, ಮಂಜುನಾಥ ಆಲದಕಟ್ಟಿ, ಹನುಮಂತಪ್ಪ ಆಲೂರ, ಷಣ್ಮುಖಪ್ಪ ಹಂಪಣ್ಣನವರ, ಸೋಮಣ್ಣ ರೇವಣ್ಣವರ, ಬಸವಂತಪ್ಪ ಬಿದರಮಳ್ಳಿ, ಉಮೇಶ ಸಡಂಬಿ, ಶಿವಪುತ್ರಪ್ಪ ಅಕ್ಕಿವಳ್ಳಿ, ಬಸವರಾಜಪ್ಪ ಚಳಮರದ, ರಾಜೇಂದ್ರ ಪೂಜಾರ, ವಿರೂಪಾಕ್ಷಪ್ಪ ಗದ್ದಿ, ನಾರಾಯಣ ಈಳಿಗೇರ, ಸಿದ್ದಪ್ಪ ಹಾವೇರಿ, ಮೌನೇಶಪ್ಪ ಬಡಿಗೇರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net