ಫೆ. 24ರಂದು ಕೂರ್ಮ ಬಳಗದಿಂದ ಆಜಾದ್​ ಹಿಂದ್​

udp-22-kurma
Published on

ಉಡುಪಿ: ಕೂರ್ಮ ಫೌಂಡೇಶನ್​ ಆಶ್ರಯದಲ್ಲಿ ಫೆ.24ರಂದು ನಗರದ ಪುರಭವನದಲ್ಲಿ "ಆಜಾದ್​ ಹಿಂದ್​ ' ಶಿವಾಜಿಯಿಂದ ನೇತಾಜಿವರೆಗೆ ಸಾಧಕರ ಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಹಾರಾಷ್ಟ್ರ ವಾಗ್ಮಿ ಸಂದೀಪ್​ ಮಹಿಂದ್​ ಹಾಗೂ ಪತ್ರಕರ್ತ ಅಜಿತ್​ ಹನುಮಕ್ಕನವರ್​ ಭಾಗವಹಿಸಲಿದ್ದಾರೆ ಎಂದು ಕೂಮಾರ್ ಫೌಂಡೇಶನ್​ ಅಧ್ಯಕ್ಷ ಶ್ರೀಕಾಂತ್​ ಶೆಟ್ಟಿ ಕಾರ್ಕಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಾಯಂಕಾಲ 5 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಗಾಯಕ ರಜತ್​ ಮಯ್ಯ ಮತ್ತು ತಂಡದಿಂದ ರಾಷ್ಟ್ರಗೀತೆಗಳ ಗಾಯನ ಸ್ವರಭಾರತಿ ಹಾಗೂ ಮಂಜರಿಚಂದ್ರ ಮತ್ತು ಕಲಾವಿದರಿಂದ ನೃತ್ಯರೂಪಕಗಳು ನಮೋ ನಮೋ ಭಾರತಾಂಬೆ ಕಾರ್ಯಕ್ರಮ ನಡೆಯಲಿದೆ. 7 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಡಾ. ಸಂದೀಪ್​ ಮಹಿಂದ್​ ಗುರೂಜಿ ಹಾಗೂ ಹಿರಿಯ ಪತ್ರಕರ್ತ ಅಜಿತ್​ ಹನುಮನಕ್ಕನವರ್​ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೂರ್ಮ ಫೌಂಡೇಶನ್​ ಗೌರವಾಧ್ಯಕ್ಷ ಅಜಯ್​ ಪಿ.ಶೆಟ್ಟಿ, ಕಾರ್ಯದರ್ಶಿ ಪ್ರವಿಣ್​ ಯಕ್ಷಿಮಠ, ಕೋಶಾಧಿಕಾರಿ ಸುಜಿತ್​ ಶೆಟ್ಟಿ, ಸಂಚಾಲಕ ಸೂರಜ್​ ಕಿದಿಯೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net