ಐಕ್ಯಮಂಟಪ ವೀಕ್ಷಣೆಗೆ ಶೀಘ್ರ ಅವಕಾಶ

KSM NEWS 26-1
Published on

ಕೂಡಲಸಂಗಮ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಮಂಗಳವಾರ ಕೂಡಲಸಂಗಮದ ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಟ್ಟಡ ಮಾರ್ಪಾಡು ಕಾಮಗಾರಿ, ಛತ್ರ ನಿರ್ಮಾಣ, ಸ್ನಾನ ಘಟ್ಟ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.

ರಾತ್ರಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಥಿತಿ ಗೃಹದಲ್ಲಿ ವಾಸ್ತವ್ಯ ಮಾಡಿ ಬುಧವಾರ ಬೆಳಗ್ಗೆ ವಾಯು ವಿಹಾರ ಮಾಡುವುದರ ಮೂಲಕ ಸ್ವಚ್ಛತೆ, ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು. ನಂತರ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆದು, ಬಸವಣ್ಣ ಐಕ್ಯ ಮಂಟಪ ದುರಸ್ತಿ ಕಾಮಗಾರಿಯನ್ನು ಪರಿಶೀಲಿಸಿ, ಮಂಡಳಿ ಕಾರ್ಯಾಲಯದಲ್ಲಿ ಅಧಿಕಾರಿಗಳ ಸಭೆ ಮಾಡಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಶಿವಯೋಗಿ ಕಳಸದ, ಬಸವಣ್ಣನ ತತ್ವಗಳು ಜಗತ್ತಿಗೆ ಭಿತ್ತರಿಸುವ ಉದ್ದೇಶದಿಂದ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಇನ್ನೂ ಕೆಲವು ಕಾಮಗಾರಿಗಳು ಆರಂಭವಾಗಬೇಕಾಗಿವೆ. ಕೂಡಲೇ ಆರಂಭಿಸುವಂತೆ ಮಂಡಳಿ ಆಯುಕ್ತರಿಗೆ ಸೂಚಿಸಿದ್ದೇನೆ. ಬಸವಣ್ಣನ ಐಕ್ಯಮಂಟಪ ವೀಕ್ಷಣೆಗೆ ಕೂಡಲೇ ಭಕ್ತರಿಗೆ, ಪ್ರವಾಸಿಗರ ಅವಕಾಶ ಕಲ್ಪಿಸಲಾಗುವುದು ಎಂದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net